ಉ.ಕ ಸುದ್ದಿಜಾಲ ಕಾಗವಾಡ :

ನಾನು ಬೆಳಗಾವಿ ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತ ನನ್ನ ವಿರುದ್ದ ಯಾರೆ ಬಂದರೂ ನಾನು ಸಮರ್ಥ ಜನ ಓಲೈಕೆ ಇರುವವರಿಗೆ ಮತ ಹಾಕ್ತಾರೆ, ಕಾದು ನೋಡಿ‌ ಎಂದು ಕಾಗವಾಡ ಶಾಸಕ ರಾಜು ಕಾಗೆ ಖಡಕ್ ಆಗಿ ಹೇಳಿಕೆ ನೀಡಿದ್ದಾರೆ.

ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿರುವ ತಮ್ಮ ಸ್ವ ಗೃಹದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು. ಬೆಳಗಾವಿ ಜಿಲ್ಲೆ DCC ಬ್ಯಾಂಕ್ ಚುನಾವಣೆ ನಾನು ಇಳಿಯಿವೆ ಎಂದಿದ್ದ ರಾಜು ಕಾಗೆ ಅದರ ಬೆನ್ನಲ್ಲೇ ಮಾಜಿ ಸಚಿವ ಶ್ರೀಮಂತ ಪಾಟೀಲ ಪುತ್ರ ಶ್ರೀನಿವಾಸ್ ಪಾಟೀಲ ಚುನಾವಣೆಗೆ ನಿಲ್ಲುವ ಸಾಧ್ಯತೆ ಬಗ್ಗೆ ಮಾತನಾಡೊದ ಅವರು ಇದು ಪ್ರಜಾಪ್ರಭುತ್ವ ವೆವಸ್ಥೆ ಎಲ್ಲರೂ ಚುನಾವಣೆಗೆ ನಿಲ್ಲಬಹುದು. ನಾನು ಚುನಾವಣೆಗೆ ನಿಲ್ಲುವುದು ಫಿಕ್ಸ್ ಎಂದಿದ್ದಾರೆ‌

ಧರ್ಮಸ್ಥಳ ಬುರುಡೆ ಕೇಸ್ ವಿಚಾರವಾಗಿ ರಾಜ್ಯದಲ್ಲಿ ಪರ ವಿರೋಧದ ಮಾತು ಕೇಳಿ ಬರುತ್ತಿದೆ ಈ ವಿಚಾರವಾಗಿ ರಾಜು ಕಾಗೆ ಮಾತನಾಡಿದ್ದಾರೆ‌. ಈಗಾಗಲೆ SIT ತಂಡ ತನಿಖೆ ಚುರುಕುಗೊಳಿಸಿದ್ದು. ದೂರುದಾರ 13 ಶವ ಹುತಿರುವ ಬಗ್ಗೆ ಸ್ಥಳಗಳ ಮಾಹಿತಿ ನೀಡಿದ್ದ ಈ ಕುರಿತು ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಂಡಿದೆ.

ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಕಾಗವಾಡ ಹಾಲಿ ಶಾಸಕ ರಾಜು ಕಾಗೆ ಪ್ರತಿಕ್ರಿಯೆ ನೀಡಿದ್ದು ಇದೊಂದು ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ದೇಶದಲ್ಲಿ ಧರ್ಮಸ್ಥಳ ಎಂಬುದು ಸನಾತನ ಧರ್ಮದ ನಂಬಿಕೆಯ ಕ್ಷೇತ್ರ. ಇಂಥ ಧರ್ಮ ಕ್ಷೇತ್ರದ ಹೆಸರು ಹಾಳು ಮಾಡುವ ನಿಟ್ಟಿನಲ್ಲಿ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.

ದಿನಗಳು ವಿಶೇಷ ತನಿಖಾ ತಂಡ ತನಿಖೆಯನ್ನು ಚುರುಕುಗಳಿಸಿದ್ದು ಕಾನೂನಾತ್ಮಕವಾಗಿ ಯಾರೆ ತಪ್ಪು ಮಾಡಿದರು. ಶಿಕ್ಷೆ ಖಂಡಿತ ಎಂದು ಹೇಳಿದರು.