ಉ.ಕ ಸುದ್ದಿಜಾಲ ಬಾಗಲಕೋಟೆ :

ಪಾದಾಚಾರಿಗಳ ಮೇಲೆ ಟಿಪ್ಪರ್ ಪಲ್ಟಿಯಾದ ಪರಿಣಾಮವಾಗಿ ಐವರಯ ದುರ್ಮರಣ ಹೊಂದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ಯಾಳ ಕ್ರಾಸ್‌ನಲ್ಲಿ ಜರುಗಿದೆ.

ಬೈಟ್ : ಧರಿಯಪ್ಪ ಹೊನ್ನಿಹಾಳ – ಮೃತರ ಸಂಬಂಧಿ

ಈ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಹೊಲದ‌ಲ್ಲಿನ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಪಾದಾಚಾರಿಗಳ ಮೇಲೆ ಟಿಪ್ಪರ ಪಲ್ಟಿಯಾಗಿದೆ.ಟಿಪ್ಪರ್ ಟಾಯರ್ ಬ್ಲಾಸ್ಟ ಆದ ಪತಿಣಾಮವಾಗಿ ದುರ್ಘಟನೆ ಜರುಗಿದೆ ಎನ್ನಲಾಗಿದೆ.

ಅಪಘಾತದಲ್ಲಿ ಮೃತರಾದ ಐವರು ಒಂದೇ ಕುಟುಂಬದವರಾಗಿದ್ದಾರೆ. ಯಂಕಪ್ಪ ಶಿವಪ್ಪ ತೋಳಮಟ್ಟಿ (70), ಯಲ್ಲವ್ವ ಯಂಕಪ್ಪ ತೋಳಮಟ್ಟಿ(ಪತ್ನಿ) (60), ಪುಂಡಲೀಕ್ ಯಂಕಪ್ಪ ತೋಳಮಟ್ಟಿ (ಮಗ) (35),

ಅಶೋಕ ನಿಂಗಪ್ಪ ಬಮ್ಮಣ್ಣವರ (ಅಳಿಯ- ಮಗಳ ಗಂಡ) (50), ನಾಗವ್ವ ಅಶೋಕ ಬಮ್ಮಣ್ಣವರ( ಯಂಕಪ್ಪ ಅವರ ಮಗಳು) (45) ಎಂದು ಗುರ್ತಿಸಲಾಗಿದೆ.

ಅಪಘಾತ ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಹಾಗೂ ಬೀಳಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.