ಉ.ಕ ಸುದ್ದಿಜಾಲ ಮೋಳೆ :
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ರೈತ ಸಾವನಪ್ಪಿದ್ದಾನೆ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ರೈತ ಸಾವನಪ್ಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೋಳೆ ಗ್ರಾಮದ ರೈತ ಸತ್ಯಪ್ಪ ರಾಮು ಮುಂಜೆ (58) ಸಾವನಪ್ಪಿರುವ ದುರ್ದೈವಿ. ಹೆಸ್ಕಾಂ ವಿದ್ಯುತ್ ತಂತಿ ಹರಿದು ಕೆಳಗೆ ಬಿದಿದ್ದು ಮದ್ಯಾಹ್ನ ಜಮೀನಿಗೆ ನೀರು ಹಾಯಿಸಲು ಹೋಗಿದ್ದ ರೈತ ಸತ್ಯಪ್ಪ ಹರಿದು ಬಿದಿರುವ ತಂತಿಯ ಮೇಲೆ ಕಾಲಿಟ್ಟ ಪರಿಣಾಮ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ
ಹೆಸ್ಕಾಂ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕುಟುಂಬಸ್ಥರು ಸತ್ಯಪ್ಪ ಸಾವಿಗೆ ಹೆಸ್ಕಾಂ ಶಾಖಾಧಿಕಾರಿ ಹಾಗೂ ಲೈನ್‌ಮನ್ ಕಾರಣ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.
ಹೆಸ್ಕಾಂ ಶಾಖಾಧಿಕಾರಿ ಹಾಗೂ ಲೈನ್‌ಮನ್ ವಿರುದ್ದ ಸತ್ಯಪ್ಪ ಕುಟುಂಬಸ್ಥರು ಕಾಗವಾಡ ಪೋಲಿಸರ ಬಳಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಕಾಗವಾಡ ಪೋಲಿಸರು ಬೇಟಿ ನೀಡಿ ಪರಶೀಲನೆ ಮಾಡಿದ್ದಾರೆ.