ಉ.ಕ ಸುದ್ದಿಜಾಲ ಹುಕ್ಕೇರಿ :
ಎರಡು ಕೋಟಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ ಆರೋಪ ಪ್ರಕರಣ. ಮಾಜಿ ಸೈನಿಕನ ಪತ್ನಿಯ ಪ್ರಿಯಕರನಿಂದ ಸ್ಪೋಟಕ ಹೇಳಿಕೆ ಬಿಡುಗಡೆ. ಸೇಲ್ಫಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಪ್ರಿಯಕರ ಪುಂಡಲೀಕ ಡೊಂಬರ್. ಘೋಡಗೇರಿಯಲ್ಲಿ ಪುಟ್ಟದೊಂದು ಎಗ್ ರೈಸ್ ಅಂಗಡಿ ಮಾಡಿಕೊಂಡಿದ್ದೆ.ಅಲ್ಲಿಗೆ ಸುಮಾ ಗಂಡ ಸಂದೀಪ್ ಬರುತ್ತಿದ್ದ.
ನಿವೃತ್ತಿಯಾಗಿ ಬಂದು ಖಾಲಿ ಕೂಡುವ ಬದಲು ಆತನೂ ಟೀ ಅಂಗಡಿ ಓಪನ್ ಮಾಡಿದ. ಆಳು ಸಿಗದಿದ್ದಕ್ಕೆ ನನ್ನ ಶಾಪ್ ಬಂದ್ ಮಾಡಿಸಿ ಟೀ ಅಂಗಡಿಗೆ ಕರೆದುಕೊಂಡು ಹೋದ್ರೂ. ಅಲ್ಲಿಗೆ ಹೋದ ಬಳಿಕ ಸಂದೀಪ್ ಪತ್ನಿ ಸುಮಾ ಪರಿಚಯ ಆಯ್ತ. ಇಬ್ಬರ ನಡುವೆ ಸ್ನೇಹ ಆಗಿ ಬಳಿಕ ರಿಲೇಷನ್ ಶೀಪ್ ಕೂಡ ಆಯ್ತು.
ಬಾಕ್ಸ್ ಗಟ್ಟಲೇ ಮದ್ಯ ಹಾಗೂ ನಿದ್ದೆ ಮಾತ್ರೆ ಮನೆಯಲ್ಲಿ ಇಟ್ಟು ಕುಡಿಸುತ್ತಿದ್ಲೂ. ಹೀಗೆ ಯಾಕೆ ಮಾಡ್ತಿರಿ ಅಂತಾ ಕೇಳಿದ್ರೇ ಗಂಡ ಸತ್ರೂ ಸಾಯಲಿ ಅಂತಿದ್ಲೂ. ಹುಕ್ಕೇರಿ ಜಾತ್ರೆಗೆ ಹೋಗಿ ಬರುವಾಗ ಆ್ಯಕ್ಸಿಂಡೆಟ್ ಆಯ್ತು. ಸಂದೀಪ್ ಆಸ್ಪತ್ರೆಗೆ ದಾಖಲಾದಾಗ ಸುಮಾ ಕಾಲ್ ಮಾಡಿ ಹುಳುಗಳಿಗೆ ಹೊಡೆಯುವ ಔಷಧ ತಗೊಂಡು ಬಾ ಅಂದ್ಲೂ. ನಾನು ಔಷಧ ಕೊಟ್ಟ ಮಾರನೇ ದಿನ ಸಂದೀಪ್ ಸಾಯುತ್ತಾನೆ.
ಆಕೆ ಹೇಳಿದ ಮಾತು ಕೇಳಿದ್ರೇ ಅನುಮಾನ ಬರುತ್ತಿದೆ. ಆತನ ಮೇಲೆ ಇನ್ಶುರೆನ್ಸ್ ಮಾಡ್ಸಿದೀನಿ. ಹಣ ಬರುತ್ತೆ ನಿನ್ನ ಎರಡು ಮಕ್ಕಳು ಸೇರಿ ನಾಲ್ಕು ಮಕ್ಕಳ ಜೊತೆಗೆ ಬೆಳಗಾವಿಗೆ ಹೋಗಿ ಸೆಟ್ಲ್ ಆಗೋಣ ಅಂದಿದ್ಲೂ. ನಾನು ಔಷಧ ಕೊಟ್ಟ ಮಾರನೇ ದಿನ ಸತ್ತಿದ್ದು ಹೀಗಾಗಿ ಸಾವಿನಲ್ಲಿ ಅನುಮಾನ ಬರ್ತಿದೆ.
ಸಂದೀಪ್ ಸತ್ತ ಮಾರನೇ ದಿನ ನಾನು ಕೊಟ್ಟ ಔಷಧಿ ಸೇರಿ ಬೇರೆ ಎನೇನೋ ತಂದು ಕೊಟ್ಟು ಎಲ್ಲಿಯಾದ್ರೂ ಚೆಲ್ಲು ಅಂದಿದ್ಲೂ. ಇಲ್ಲಿ ಒಬ್ಬ ಸೈನಿಕನ ಸಾವಾಗಿದೆ ಅವರಿಗೆ ಕಠಿಣ ಕ್ರಮ ಆಗಬೇಕು. ಇದರಲ್ಲಿ ನಾನೇನಾದ್ರೂ ಸುಳ್ಳು ಹೇಳಿದ್ರೂ ಜೈಲಿಗೆ ಹೋಗೋಕು ಸಿದ್ದ.
ಮರು ತಪಾಸಣೆ ಆಗಬೇಕು ಅಲ್ಲಿ ವರೆಗೂ ಒಂದು ರೂಪಾಯಿ ಇನ್ಶುರೆನ್ಸ್ ಹೋಗಬಾರದು ಎಂದು ಒತ್ತಾಯ. ನಿನ್ನೆಯಷ್ಟೇ ಸಂದೀಪ್ ಶವ ಹೊರ ತೆಗೆದು ಪರಿಶೀಲನೆ ನಡೆಸಿರುವ ಪೊಲೀಸರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ನಡೆದಿದ್ದ ಘಟನೆ. ಮಾಜಿ ಸೈನಿಕ ಸಂದೀಪ್ ಮಾಂಜರಿ ಕೊಲೆ ಶಂಕೆಯಲ್ಲಿ ಶವ ಹೊರ ತೆಗೆದು ಪರಿಶೀಲನೆ.
Vidio – ಎರಡು ಕೋಟಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ ಆರೋಪ ಪ್ರಕರಣ, ಮಾಜಿ ಸೈನಿಕನ ಪತ್ನಿಯ ಪ್ರಿಯಕರನಿಂದ ಸ್ಪೋಟಕ ಹೇಳಿಕೆ ಬಿಡುಗಡೆ
