ಉ.ಕ ಸುದ್ದಿಜಾಲ ರಾಯಬಾಗ :
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ತೇರದಾಳ ಶಾಸಕ. ತಾಕತ್ ಇದ್ದರೆ ವಕ್ಫ್ ವಿರುದ್ಧ ಹೊರಡಲು ನಮ್ಮ ಜೊತೆ ಕೈ ಜೋಡಿಸಲಿ. ಇನ್ನೊಂದು 10 ವರ್ಷ ಕಾಂಗ್ರೆಸ್ಗೆ ಅಧಿಕಾರ ಇದ್ದರೆ ದೇಶವನ್ನೇ ಮಾರುತ್ತಿದ್ದರು ಎಂದು ಕಾಂಗ್ರೆಸ್ ವಿರುದ್ದ ತೇರದಾಳ ಶಾಸಕ ಸಿದ್ದು ಸವದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದು 10 ವರ್ಷ ಕಾಂಗ್ರೆಸ್ಗೆ ಅಧಿಕಾರ ಇದ್ದರೆ ದೇಶವನ್ನೇ ಮಾರುತ್ತಿದ್ದರು : ಸಿದ್ದು ಸವದಿ
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಮಾತನಾಡಿದ ಅವರು 1992 ಹಾಗೂ 2013 ರಲ್ಲಿ ಮನಮೋಹನ್ ಸಿಂಗ್ ಕಾನೂನು ತಿದ್ದುಪಡಿ ಮಾಡಿದ್ದಾರೆ. ವಕ್ಫ್ ಬೋರ್ಡ್ ಕೈ ಮಾಡಿದಲ್ಲಿ ಆಸ್ತಿ ಕೊಡಬೇಕು ಹಿಂಗೆ ಮಾಡುತ್ತಾ ಹೋದರೆ ದೇಶದ ಆಸ್ತಿಯನ್ನು ಲೂಟಿ ಮಾಡುತ್ತಾರೆ.
ಈಗಾಗಲೇ 9 ಲಕ್ಷ ಎಕರೆ ವಕ್ಫ್ ಬೋರ್ಡ್ ನಲ್ಲಿ ದಾಖಲಾಗಿದೆ. ಕಾಂಗ್ರೆಸ್ ಕಾನೂನು ರಚಿಸಿದರಿಂದ ನಮ್ಮ ಅವಧಿಯಲ್ಲಿ ಕಾನೂನು ರೀತಿಯಲ್ಲಿ ಅವರಿಗೆ ಜಮೀನು ಹೋಗಿರಬಹುದು. ನಾವು ಆ ಕಾನೂನನ್ನು ರದ್ದು ಮಾಡೋಕೆ ಮುಂದಾಗಿದ್ದೇವೆ.
ಕಾಂಗ್ರೆಸ್ನವರು ನಮ್ಮ ಜೊತೆ ಕೈಜೋಡಿಸಲಿ
ತಾಕತ್ತಿದ್ದರೆ. ಬಿಜೆಪಿ ಜೊತೆಗೆ ವಕ್ಫ್ ಕಾನೂನು ರದ್ದತಿಗೆ ಕಾಂಗ್ರೆಸ್ ಮುಂದಾಗಲಿ. ಒಬಾಮಾ ಬುಕ್ಕಿನಲ್ಲಿ ಬರೆದಿದ್ದಾನೆ ಇನ್ನು ಹತ್ತು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೆ ಈ ದೇಶವನ್ನೇ ಮಾರಿ ಹೋಗುತ್ತಿದ್ದರು.
ಮಹಾರಾಷ್ಟ್ರ ಜನರು ಬುದ್ಧಿವಂತರು ಕಾಂಗ್ರೆಸ್ಗೆ ತಕ್ಕ ಪಾಠವನ್ನೇ ಕಲಿಸಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತೇರದಾಳ ಮತಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ.