ಉ.ಕ ಸುದ್ದಿಜಾಲ ಕಾಗವಾಡ :

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಲೋಕೂರು ಗ್ರಾಮದಲ್ಲಿ ಏ.5 ಮತ್ತು 6 ರಂದು ನೂತನ ಶ್ರೀ 1008ಆದಿನಾಥ ದಿಗಂಬರ ಜೈನ ಮಂದಿರ ಮತ್ತು ಮಾನಸಸ್ಥಂಬದ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಮತ್ತು ಸನ್ಮತಿ ಸೂರ್ಯ ತ್ಯಾಗಿ ಭವನದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಪಪೂ ಶ್ರೀ 108 ಆಚಾರ್ಯ ಸೂರ್ಯಸಾಗರಜೀ ಮಹಾರಾಜರು ತಿಳಿಸಿದ್ದಾರೆ.

ಏ.5 ರಂದು ರಾಷ್ಟ್ರಸಂತ ಶ್ರೀ 108 ಆಚಾರ್ಯ ಗುಣಧರನಂದಿಜೀ ಮಹಾರಾಜರ ಆಶಿರ್ವಾದದೊಂದಿಗೆ ಬೆಳಿಗ್ಗೆ 7 ಗಂಟೆಯಿಂದ ಪಂಚಾಮೃತ ಅಭಿಷೇಕ, ಶಾಂತಿಧಾರಾ, ವಾಸ್ತು ನಿವಾರಣ ಹೋಮ-ಹವನ ನಡೆಯಲಿದೆ. ರವಿವಾರ ದಿ.6 ರಂದು ನೂತನ ಜೈನ ಮಂದಿರ ಮತ್ತು ಮಾನಸಸ್ಥಂಭದ ಭೂಮಿಪೂಜೆ ಜೊತೆಗೆ ಎರಡು ದಿನಗಳ ಕಾಲ ಮಂಗಲ ಪ್ರವಚನ ನಡೆಯಲಿವೆ.

ಕಾರ್ಯಕ್ರಮದಲ್ಲಿ ನವಗ್ರಹ ತಿರ್ಥ ವರೂರದ ಸ್ವಸ್ಥಿಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯರು, ನಾಂದಣ ಜೈನ ಮಠಧ ಸ್ವಸ್ಥಿಶ್ರೀ ಜೀನಸೇನ ಭಟ್ಟಾರಕ ಪಟ್ಟಾಚಾರ್ಯರು, ಕೊಲ್ಲಾಪೂರದ ಸ್ವಸ್ಥಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯರು, ಜೊತೆಗೆ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗೆಡೆಯವರ ಸಹೋದರ ಉದ್ಯೋಗಪತಿ ಸುರೇಂದ್ರ ಹೆಗ್ಗಡೆ ಉಪಸ್ಥಿತರಿರುವರು.

ಕಾರ್ಯಕ್ರಮಕ್ಕೆ ಸಕಲ ಜೈನ ಬಾಂಧವರು ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪಪೂ ಶ್ರೀ 108 ಆಚಾರ್ಯ ಸೂರ್ಯಸಾಗರಜೀ ಮಹಾರಾಜರು ಮನವಿ ಮಾಡಿದ್ದಾರೆ.