ಉ.ಕ ಸುದ್ದಿಜಾಲ ಅಥಣಿ :
ಮಾಜಿ ಡಿಸಿಎಂ ಹಾಗೂ ವಿಧಾನ ಪರಿಷತ ಸದಸ್ಯ ಲಕ್ಷಣ ಸವದಿಯವರ ವಿಶೇಷ ಪ್ರಯತ್ನದಿಂದ ಸಾಕಾರಗೊಳ್ಳುತ್ತಿರುವ ಮಹತ್ವಾಕಾಂಕ್ಷಿ ಯೋಜನೆಗೆ ಅನುದಾನ ಮಂಜೂರಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ದಿನದ 24 ತಾಸು ನೀರಿನ ಸೌಲಭ್ಯ ಸಿಗಬೇಕೆನ್ನುವ ಅಥಣಿ ಪಟ್ಟಣದ ಜನರ ಬಹುದಿನಗಳ ಕನಸಾಗಿತ್ತು ಈಗ ಅದು ನನಸಾಗುವ ಕಾಲ ಸನ್ನಿಹಿತವಾಗಿದೆ.
ಈ ಯೋಜನೆಗೆ ರಾಜ್ಯ ಸರ್ಕಾರದಿಂದ 73.50 ಕೋಟಿ ರೂ.ಮಂಜೂರಾಗಿದೆ. ಇದು ಅಥಣಿ ಪಟ್ಟಣದ ನಾಗರಿಕರಲ್ಲಿ ಸಂತಸ ಮೂಡಿಸಿದೆ. ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದರೆ.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಡಿಸಿಎಂ ಹಾಗೂ ವಿ.ಪ ಸದಸ್ಯ ಲಕ್ಷ್ಮಣ ಸವದಿ ಅವರಿಗೆ ಅಥಣಿ ಪಟ್ಟಣದ ಜನತೆ ಹಾಗೂ ಲಕ್ಷ್ಮಣ ಸಂಸವದಿಯವರ ಅಭಿಮಾನಿ ಬಳಗದಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.