ಉ.ಕ ಸುದ್ದಿಜಾಲ ಅಥಣಿ :

ರಾಜ್ಯ ರಾಜಕಾರಣದಲ್ಲಿ ಅಸಮಾಧಾನದ ಕಿಡಿ ಹೆಚ್ಚುತ್ತಲೆ ಇದೆ. ಬಿಜೆಪಿ-ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಶುರುವಾಗಿದ್ದು. ರಾಜ್ಯಾಧ್ಯಕ್ಷರ ಸ್ಥಾನ ಬಡವನೆಯ ಕೂಗು ಕೇಳಿ ಬಂದಿದೆ.ಇದೆ ವಿಚಾರವಾಗಿ ಅಥಣಿ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದು ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.

ಬಿಜೆಪಿ ನಾಯಕರಿಗೆ ಭವಿಸ್ಯ ಹೇಳೋಕೆ ಬರುತ್ತಾ, ಹಾಗಿದ್ರೆ ಹೇಳಲಿ.ವಿರೋಧ ಪಕ್ಷದ ನಾಯಕರು ನಮ್ಮ ಬಬಲಾದಿ ಮಠಕ್ಕೆ ಬಂದು ಭವಿಷ್ಯ ಹೇಳುವ ತರಬೇತಿ ತೊಗೊಳಲಿ,ಗ್ರಂಥ ಓದಲಿ ಎಂದು ಸರ್ಕಾರ ಬದಲಾವಣೆ ವಿಚಾರಕ್ಕೆ ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.

ಹಾಗೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಶಾಸಕ ರಾಜು ಕಾಗೆ ವಿಚಾರಕ್ಕೆ, ಆತ ಸರ್ಕಾರದ ವಿರುದ್ಧ ಮಾತನಾಡಿಲ್ಲ,ಅಧಿಕಾರಿಗಳ ಲೋಪ ದೋಷಗಳ ಬಗ್ಗೆ ಮಾತನಾಡಿದ್ದಾರೆ ನಾನು ಭೇಟಿಯಾಗಿ ಮಾತನಾಡುತ್ತೇನೆ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರ ಸಧ್ಯಕಿಲ್ಲ ಸಚಿವ ಸಂಪುಟ ವಿಸ್ತರಣೆ ಬಹುತೇಕ ದಸರಾ ಬಳಿಕ ಆಗಲಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನಡೆಸುತ್ತಿದೆ 2028 ರ ಚುನಾವಣೆ ಯಲ್ಲೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.