ಉ.ಕ ಸುದ್ದಿಜಾಲ ಚಿಕ್ಕೋಡಿ :

ಆಕಸ್ಮಿಕ ಅಪಘಾತದಲ್ಲಿ ಕಾಲು ಕಳೆದುಕೊಂಡ ಇಂಗಳಿ ಬಾಲಕಿ  ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಟ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಶ್ರಾವಣಿ ಪರಶುರಾಮ ಅಂಬಿ ಎಂಬ ಬಾಲಕಿಗೆ ಬೈಲಹೊಂಗಲದಲ್ಲಿ ಎರಡು ಕಾಲುಗಳ ಮೇಲೆ ಬಸ್ ಹಾಯ್ದು ಗಂಭೀರವಾಗಿ ಗಾಯಗೊಂಡು, ಈಗ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬಾಲಕಿಯ ಕುಟುಂಬದ ಆರ್ಥಿಕ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಆಕೆಯ ಹೆಚ್ವಿನ ಚಿಕಿತ್ಸೆ ಗೆ ಸಂಘ ಸಂಸ್ಥಗಳಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ. ಇಂಗಳಿ ಗ್ರಾಮದ ಪರಶುರಾಮ ಅಶೋಕ ಅಂಬಿ ಇವರ 5 ವರ್ಷದ ಸುಪುತ್ರಿ ಶ್ರಾವಣಿ ಅಂಬಿ ಇವಳು ತನ್ನ ತಾಯಿಯ ಜೊತೆ ಅಜ್ಜಿಯ ಮನೆಗೆ ಹೊರಟಾಗ ಬೈಲಹೊಂಗಲ್ ಬಸ್ ನಿಲ್ದಾಣದಲ್ಲಿ ಆಕೆಯ ಕಾಲುಗಳ ಮೇಲೆ ಬಸ್ ಹಾಯ್ದು ಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿದ್ದು, ಬೆಳಗಾವಿಯ ವಿಜಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ತೀರ ಬಡತನದ ಕುಟಂಬವಾಗಿರುವ ಪರಶುರಾಮ ಅಂಬಿ ಅವರು ತಮ್ಮ ಜೀವನವನ್ನು ದಿನನಿತ್ಯದ ಕುಲಿಯಿಂದ ಸಾಗಿಸುತ್ತಿದ್ದು, ಇಂತಹ ಘಟನೆಯಿಂದ ವಿಚಲಿತಗೊಂಡಿದ್ದಾರೆ. ಮಗಳು ಶ್ರಾವಣಿಯ ಕಾಲುಗಳನ್ನು  ಆಪರೇಶನ್ ಮಾಡಿ, ಸರಿಪಡಿಸಬಹುದೆಂದು ವೈದರು ಹೇಳಿದ್ದಾರೆ. ಮತ್ತು ಅದಕ್ಕೆ 5 ರಿಂದ 6 ಲಕ್ಷ ಖರ್ಚಾಗುತ್ತದೆ ಎಂದು ತಿಳಿಸಿದ್ದು, ತೀರ ಬಡತನದ ಕುಟುಂಬಕ್ಕೆ ಇಷ್ಟೊಂದು ಹಣ ಹೊಂದಿಸುವುದು ತುಂಬಾ ಕಷ್ಟಕರ ವಿಷಯವಾಗಿದೆ.

ಈ ವಿಷಯ ತಿಳಿದು ಪರಶುರಾಮ ಅಂಬಿ ಇವರ ಸ್ನೇಹಿತರು ಹಾಗೂ ಇಂಗಳಿ ಗ್ರಾಮದ ಅನೇಕ ಯುವಕರು ಸೇರಿ ಗ್ರಾಮದ ಮನೆ ಮನೆಯಿಂದ ಹಣ ಸಂಗ್ರಹ ಮಾಡುತ್ತಿದ್ದಾರೆ. ಈಗಾಗಲೇ ಒಂದು ಆಪರೇಶನ್ ಮಾಡಲಾಗಿದ್ದು, ಇನ್ನೂ ಅನೇಕ ಆಪರೇಶನ್ ಮಾಡುವ ಅವಶ್ಯಕತೆ ಇದೆ. ನೊಂದ ಬಡ ಕುಟುಂಬಕ್ಕೆ ಸಹಾಯದ ಅವಶ್ಯಕತೆ ಇದ್ದು, ಸಂಘ ಸಂಸ್ಥೆಗಳು, ದಾನಿಗಳು ಉದಾರ ಮನಸ್ಸಿನಿಂದ ಆರ್ಥಿಕ ನೆರವು ನೀಡಬೇಕೆಂದು ಈ ಮೂಲಕ ಪರಶುರಾಮ ಅಂಬಿ ಅವರ ಸ್ನೇಹಿತರು ವಿನಂತಿಸಿಕೊಂಡಿದ್ದಾರೆ.

ಆರ್ಥಿಕ ನೆರವು ನೀಡ ಬಯಸುವವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆ ಇಂಗಳಿ ಪರಶುರಾಮ ಅಶೋಕ ಅಂಬಿ ಇವರ ಅಕೌಂಟ್ ನಂ. 89102733339 ಮತ್ತು ಐಎಫ್‌ಸಿ ಕೋಡ್: ಕೆವ್ಹಿಜಿಬಿ 0002306 ಈ ಖಾತೆಗೆ ಸಹಾಯ ಮೊತ್ತ ಸಂದಾಯ ಮಾಡಿ, ನೊಂದ ಬಡ ಕುಟುಂಬಕ್ಕೆ ಆಸರೆಯಾಗಬೇಕೆಂದು ಕೇಳಿಕೊಂಡಿದ್ದಾರೆ.