ಉ.ಕ ಸುದ್ದಿಜಾಲ ಮೈಸೂರು :
ಮದುವೆ ಮಾಡಿಕೊಳ್ಳಲು ಮಗಳನ್ನ ಕೊಡದೆ ಇದಕ್ಕೆ ಇಲ್ಲೊಬ್ಬ ಭೂಪ ಮಾಡಿದೇನು ಗೊತ್ತಾ ಮಗಳನ್ನ ಕೊಟ್ಟು ಮದುವೆ ಮಾಡಲಿಲ್ಲ ಎಂಬ ದ್ವೇಷಕ್ಕೆ ಕಷ್ಟ ಪಟ್ಟು ಬೆಳೆದಿದ್ದ ಬರೋಬ್ಬರಿ 850 ಅಡಿಕೆ ಗಿಡ ನಾಶ ಮಾಡಿದ ಭೂಪ.
ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕಡೇ ಮನುಗನಹಳ್ಳಿ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. ಗ್ರಾಮದ ವೆಂಕಟೇಶ್ ಎಂಬುವರಿಗೆ ಸೇರಿದ ಮೂರು ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಗಿಡ. ವೆಂಕಟೇಶ್ ಪುತ್ರಿಯನ್ನ ಅದೇ ಗ್ರಾಮದ ಅಶೋಕ್ ಎಂಬಾತನಿಗೆ ಕೊಟ್ಟು ವಿವಾಹ ಮಾಡಲು ಮಾತುಕತೆ. ಹುಡುಗ ಸರಿಯಿಲ್ಲ ಎಂದು ಮದುವೆಗೆ ಒಪ್ಪದ ವೆಂಕಟೇಶ್ ಪುತ್ರಿ.
ಇದರಿಂದ ಆರಂಭಗೊಂಡ ದ್ವೇಷ. ಮೊದಲಿಗೆ ಅರ್ಧ ಎಕರೆಯಲ್ಲಿ ಬೆಳೆದಿದ್ದ ಶುಂಠಿಯನ್ನ ಅಶೋಕ ನಾಶ ಮಾಡಿದ್ದಾನೆಂಬ ಆರೋಪ. ನಿನ್ನೆ ರಾತ್ರೋರಾತ್ರಿ ಜಮೀನಿಗೆ ನೂಗ್ಗಿ ಅಡಿಕೆ ಗಿಡಗಳ ನಾಶ ಮಾಡಿದ್ದಾನೆಂದು ಗಂಭೀರ ಆರೋಪ ಮಾಡಿರುವ ವೆಂಕಟೇಶ್.
ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.