ಉ.ಕ ಸುದ್ದಿಜಾಲ ಕಾಗವಾಡ :

ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಐನಾಪೂರ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದ ಪಕ್ಕದ ಸುಮಾರು 15 ಎಕರೆ ಖಾಲಿ ಜಮೀನಿನಲ್ಲಿ 3500 ಕ್ಕೂ ಅಧಿಕ ವಿವಿಧ ಬಗೆಯ ಗಿಡಮರ ನೆಟ್ಟು ಗ್ರಾಮದ ಸುತ್ತ ಮುತ್ತಲಿನ ಬೇರೆ ಬೇರೆ ಗ್ರಾಮಗಳ ಜನರು ನೋಡಲು ಬರುವಂತಹ ಸುಂದರ ಉದ್ಯಾನವನ ವನ್ನಾಗಿ ಪರಿವರ್ತಿಸಿದ ಅಥಣಿ ವಲಯ ಅರಣ್ಯ ಅಧಿಕಾರಿ ಪ್ರಶಾಂತ ಗಾಣಿಗೇರ.

ಐನಾಪೂರ ಪಟ್ಟಣದಲ್ಲಿ ನಿರ್ಮಾಣವಾದ ಸುಂದರವಾದ ಗಾರ್ಡನ್ ವಿಡಿಯೋ- 1

ಒಟ್ಟು 15 ಎಕರೆ ಪ್ರದೇಶದಲ್ಲಿ 06 ಎಕರೆ ಕೆರೆ ಇದ್ದು ಕೆರೆಯ ಸುತ್ತ ನಿರ್ಮಾಣ ಮಾಡಿದ ವಾಕಿಂಗ್ ಲೇನ್‌ ಅಂತು ವಾಕಿಂಗ್ ಮಾಡುವವರಿಗೆ ಹೇಳಿ ಮಾಡಿಸಿದಂತಿದೆ. ಮಕ್ಕಳಿಗೆ ಆಟವಾಡಲು ವಿವಿಧ ಬಗೆಯ ಆಟಿಕೆ ಸಾಮಾನುಗಳು, ಕುಳಿತುಕೊಳ್ಳಲು ಹಟ್‌ಗಳು.

ನೀರಿನ ಕಾರಂಜಿ, ಗಾರ್ಡನ್, ವಯೋವೃದ್ದ ಹಾಗೂ ಯುವಕರ ವ್ಯಾಯಾಮ ವಸ್ತುಗಳು ಸೇರಿದಂತೆ ವಿನೂತನ ಮಾದರಿಯ ಅಲಂಕಾರಿಕ ಗಿಡಗಳನ್ನು ಬೆಳೆಸುವುದರೊಂದಿಗೆ ಔಷಧಿಯ ವನ ಎಂಬುವಂತೆ ಮಾಡುತ್ತಿದ್ದಾರೆ. ಕತ್ತಲಲ್ಲೂ ವಿಹಾರಕ್ಕೆ ಅನುಕೂಲವಾಗಲೆಂದು ಸಾರ್ವಜನಿಕರ ಸಹಕಾರದಿಂದ 31 ಕಡೆ ಸೋಲಾರ ಲ್ಯಾಂಪ್ ಸಹ ಅಳವಡಿಸಿದ್ದಾರೆ.

ಐನಾಪೂರ ಪಟ್ಟಣದಲ್ಲಿ ನಿರ್ಮಾಣವಾದ ಸುಂದರವಾದ ಗಾರ್ಡನ್ ವಿಡಿಯೋ- 2

ಇಲ್ಲಿ ಸ್ವತಃ ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ ಅವರ ಸಂಬಂಧಿಕರೊಬ್ಬರು ಈ ಉದ್ಯಾನವನದಲ್ಲಿ ವಿಹರಿಸಿ ನೆಮ್ಮದಿ ಪಡೆದು ಹೆಮ್ಮೆ ಪಡುತ್ತಾ ನಮ್ಮ ಗ್ರಾಮದ ಹೆಸರು ಉಳಿಸುವಂತಃ ಕೆಲಸ ಮಾಡಿದ ಅಧಿಕಾರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.