ಉ.ಕ ಸುದ್ದಿಜಾಲ ಅಥಣಿ :
ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೈ ಶಾಸಕರ ಬೆಂಬಲಿಗರಿಂದ ನಿಲ್ಲದ ಸಿಎಂ ರೇಸ್ ಅಭಿಯಾನ. ಸಿಎಂ ರೇಸ್‌ನಲ್ಲಿ ಸತೀಶ್ ಜಾರಕಿಹೊಳಿ ಆಯ್ತು, ಲಕ್ಷ್ಮೀ ಹೆಬ್ಬಾಳ್ಕರ್ ಆಯ್ತು, ಸದ್ಯ ಲಕ್ಷ್ಮಣ ಸವದಿ ಸರದಿ.
ಲಕ್ಷ್ಮಣ ಸವದಿ ಬೆಂಬಲಿಗರಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್. ಅಥಣಿ ವಿಧಾನಸಭೆ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ. ಬೆಳಗಾವಿಯ ನಾಯಕರ ಪೋಸ್ಟ್ ವೈರಲ್ ಆಗ್ತಿದ್ದಂತೆ ಜಿದ್ದಾಜಿದ್ದಿಗೆ ಬಿದ್ದ ಕಾರ್ಯಕರ್ತರು. ಮುಂದಿನ ಮಹಿಳಾ ಸಿಎಂ ಲಕ್ಷ್ಮೀ ಹೆಬ್ಬಾಳ್ಕರ್ ಎಂದು ಪೋಸ್ಟ್ ಮಾಡಿದ್ದ ಹೆಬ್ಬಾಳ್ಕರ್ ಬೆಂಬಲಿಗರು.
ಸಿಎಂ ರೇಸ್‌ನಲ್ಲಿ ಮುಂಚೂಣಿಗೆ ಬಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ. ‘ಕರ್ನಾಟಕದ ಸಿಎಂ ಆಗಲು ಸೂಕ್ತ ವ್ಯಕ್ತಿ ಲಕ್ಷ್ಮಣ ಸವದಿ ಎಂದು ಪೋಸ್ಟ್ ಮಾಡಿದ ಬೆಂಬಲಿಗರು. ವಾಟ್ಸ್ ಅಪ್‌ಗಳಲ್ಲಿ ಸ್ಟೇಟಸ್ ಇಟ್ಟು ಟ್ರಂಡ್ ಮಾಡಲು ಮುಂದಾದ ಸವದಿ ಬೆಂಬಲಿಗರು.