ಉ.ಕ ಸುದ್ದಿಜಾಲ ಹುಕ್ಕೇರಿ :
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಂ ಬಳಿಯ ಲೇಬರ್ ಕ್ಯಾಂಪ್ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾದ 38 ಅಡಿ ಎತ್ತರದ ಗಣೇಶ ಮೂರ್ತಿ ಭಕ್ತರ ಗಮನ ಸೆಳೆಯುತ್ತಿದೆ.
ಲೇಬರ್ ಕ್ಯಾಂಪ್‌ನ ಸಾರ್ವಜನಿಕ ಗಣೇಶ ಉತ್ಸವ ಮಂಡಳಿಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಯುವಕರು ಸೇರಿ ಬೆಳಗಾವಿ ಕಾಕತಿಯ ಮಹೇಶ ಮಾಸ್ತಿಕರ ಎಂಬುವವರಿಗೆ ಮೂರ್ತಿ ತಯಾರಿಸಲು ತಿಳಿಸಿದ್ದರು.
ಭಕ್ತರ ಅಣತಿ ಮೇರೆಗೆ 38 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಅಚ್ಚುಕಟ್ಟಾಗಿ ಮಹೇಶ್ ಮಾಸ್ತಿಕರ್ ತಯಾರಿಸಿದ್ದಾರೆ ಎಂದು ಮುಖಂಡರಾದ ಭಾರತಿ ಬಸವಣ್ಣಿ ಬೆಣ್ಣಿ, ರವಿ ಬೆಣ್ಣಿ, ಸಂದೀಪ ಕಲಕುಟಗಿ, ಬಾಳಕೃಷ್ಣ ವಡ್ಡರ, ಶಿವರಾಯಿ ಕುಂಬಾರ, ಕೆಂಪಣ್ಣ ಪಾಟೀಲ, ಶ್ರೀಧರ ಬೆಣ್ಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸುಮಾರು ₹2.25 ಲಕ್ಷ ವೆಚ್ಚದಲ್ಲಿ ಗಣೇಶ ಮೂರ್ತಿ ತಯಾರಿಸಲಾಗಿದೆ.
ದಾಖಲೆಯತ್ತ ಮೂರ್ತಿ : 2021ರಲ್ಲಿ 11 ಅಡಿ ಎತ್ತರದ ಗಣೇಶ ಮೂರ್ತಿ, 2022 ರಲ್ಲಿ 22 ಅಡಿ, 2023 ರಲ್ಲಿ 31ಅಡಿ, 2024 ರಲ್ಲಿ 38 ಅಡಿ ಎತ್ತರ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಕೀರ್ತಿ ಗಣೇಶ ಉತ್ಸವ ಮಂಡಳಿಯದ್ದು.

ಈ ಭಾಗದಲ್ಲಿ ಗಣೇಶನ ದರ್ಶನ ಪಡೆದರೆ ಬೇಡಿದ ವರ ನೀಡುತ್ತಾನೆ ಎಂಬ ನಂಬಿಕೆ ಸಾರ್ವಜನಿಕರಲ್ಲಿದೆ ಎಂದು ಭಾರತಿ ಬೆಣ್ಣಿ ಹೇಳುತ್ತಾರೆ.