ಕಾಗವಾಡ :
ರೈಲಿನಿಂದ ಇಳಿಯುವಾಗ ಅಯತಪ್ಪಿ ಯುವಕನೊರ್ವ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಕಾಗವಾಡ ತಾಲೂಕಿನ ಮೋಳೆ ಗ್ರಾಮದ ರಾಘವೇಂದ್ರ ಹಳ್ಳೊಳ್ಳಿ (28) ಮೃತ ಯುವಕ. ಇತ ಗೆಳೆಯನ ಎಂಗೇಜಮೆಂಟ್ ಸಮಾರಂಭ ಮುಗಿಸಿ ಧಾರವಾಡದಿಂದ ಮೋಳೆ ಗ್ರಾಮಕ್ಕೆ ಆಗಮಿಸಬೇಕಿತ್ತು. ಆದರೆ, ವಿಧಿ ಆಟವೇ ಬೇರೆಯಾಗಿತ್ತು. ಕುಡಚಿ ರೈಲು ನಿಲ್ದಾಣದಲ್ಲಿ ಇಳಿಯಬೇಕಿದ್ದ ರಾಘವೇಂದ್ರನಿಗೆ ಇಳಿಯಲು ತಡವಾಗಿದೆ. ಅಷ್ಟರಲ್ಲಿ ರೈಲು ಬಿಟ್ಟಿದ್ದು, ರೈಲಿನಿಂದ ಇಳಿಯಲು ಹೋದಾಗ ಆಯತಪ್ಪಿ ರೈಲಿನಿಂದ ಬಿದ್ದು ಸಾವನಪ್ಪಿದ್ದಾನೆ.
ಕುಡಚಿ ರೈಲು ನಿಲ್ದಾಣದಲ್ಲಿ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ. ಮನೆಯವರಿಗೆ ರಾಘವೇಂದ್ರ ಬರುವುದನ್ನು ಪೊನ್ ಕರೆ ಮೂಲಕ ತಿಳಿಸಿದ್ದಾನೆ. ರಾತ್ರಿ 9.30 ಆದರೂ ಬಂದಿಲ್ಲ ಹೀಗಾಗಿ ಮನೆಯವರು ರಾಘವೇಂದ್ರನಿಗೆ ಕರೆ ಮಾಡಿದರು ಕರೆ ಸ್ವೀಕರಿಸಿಲ್ಲ. ಹೀಗಾಗಿ ಗಾಬರಿಯಿಂದ ಮನೆಯವರು ಕುಡಚಿ ರೈಲು ನಿಲ್ದಾಣಕ್ಕೆ ತೆರಳಿ ವಿಚಾರಿಸಿದ್ದಾರೆ. ಸ್ಥಳೀಯ ಮಾಹಿತಿಯಿಂದ ರಾಘವೇಂದ್ರ ಮೃತ ದೇಹ ಪತ್ತೆಯಾಗಿದೆ. ಯುವಕನ ಮೃತ ದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದ ಒಂದು ವರ್ಷದ ಹಿಂದೆ ಮದುವೆ ಆಗಿದ್ದ ರಾಘವೇಂದ್ರನ ಮನೆಯಲ್ಲಿ ಕತ್ತಲಾಗಿದ್ದು ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ.