ಬೆಳಗಾವಿ‌ : 

ಬೆಳಗಾವಿ ವಿಧಾನಪರಿಷತ್ ಚುನಾವಣೆ ದಿನದಿಂದ ದಿನಕ್ಕೆ ಕಾವು ಹೆಚ್ಚುತ್ತಲೆ ಇದೆ. ಅನೇಕ ವರ್ಷಗಳಿಂದ ಕಾಂಗ್ರೆಸ್, ಬಿಜೆಪಿಯಿಂದ ತಲಾ ಓರ್ವ ಅಭ್ಯರ್ಥಿ ಕಣಕ್ಕೆ ಇಳಿಸಲಾಗುತ್ತದೆ. ಈ ಬಾರಿ ಕಾಂಗ್ರೆಸ್‌ ‌ನಿಂದ ಲಕ್ಷ್ಮೀ ಹೆಬ್ಬಾಳಕರ ತಮ್ಮ ಚನ್ನರಾಜ ಹಟ್ಟಿಹೊಳಿ‌ ಸ್ಪರ್ಧಿಸುವುದು ಖಚಿತವಾದಂತಿದೆ. ಇನ್ನೂ ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಬಿಜೆಪಿಯಿಂದ ಸ್ಪರ್ಧಿಸಲು ಖಚಿತವಾದಂತಿದೆ. ಕಾಂಗ್ರೆಸ್‌ನ್ನು ಸೋಲಿಸಲೇ ಬೇಕೆಂದು‌ ಜಾರಕಿಹೊಳಿ‌ ಬ್ರದರ್ಸ್ ಲಖನ ಜಾರಕಿಹಿಳಿ ಅವರನ್ನ ವಿಧಾನಪರಿಷತ್ ಚುನಾವಣೆ ಸ್ಪರ್ಧೆಗೆ ತಯಾರಿ ನಡೆಸಿದ್ದು ಲಖನ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರಾ ಏನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೊ ಕಾಯ್ದು ನೋಡಬೇಕಿದೆ.

ಬೆಳಗಾವಿ ರಾಜಕೀಯ ಅಂದರೆ ಇಡೀ ಕರ್ನಾಟಕಕ್ಕೆ ಪ್ರಖ್ಯಾತಿ ಪಡೆದಿರುವಂತದ್ದು ಇಲ್ಲಿನ‌ ನಾಯಕರು ಮನಸ್ಸು ಮಾಡಿದರೆ ಸರ್ಕಾರ ಕೂಡಾ ಕೆಡವಿ ಹೊಸ ಸರ್ಕಾರ ರಚಿಸುವಂತ ತಾಕ್ಕತ್ತು ಬೆಳಗಾವಿ ನಾಯಕರಿದೆ. ಈಗಾಗಲೇ ವಿಧಾನ ಪರಿಷತ ಚುನಾವಣೆ ದಿನಾಂಕ‌ ನಿಗಧಿಯಾಗಿದ್ದು ಕಾಂಗ್ರೆಸ್‌ನಿಂದ ಲಕ್ಷ್ಮೀ ಹೆಬ್ಬಾಳಕರ ತಮ್ಮ ಚನ್ನರಾಜ ಹಟ್ಟಿಹೊಳಿ ಸ್ಪರ್ಧಿಸುವುದು ಖಚಿತವಾಗಿದೆ. ಇನ್ನೂ ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಸ್ಪರ್ಧಿಸುವುದು ಖಚಿತವಾಗಿದೆ. ಬಾಲಚಂದ್ರ ಜಾರಕಿಹೊಳಿ‌ ಅವರು ಬಿಜೆಪಿಯಲ್ಲಿ ಎರಡನೇ ಅಭ್ಯರ್ಥಿಯಾಗಿ ಲಖನ್ ಟಿಕೆಟ್ ಕೊಡಿ ಎಂದು ಒತ್ತಾಯಿಸಿದ್ದಾರೆ. ಅರಬಾವಿಯಲ್ಲಿ 600ಕ್ಕೂ ಹೆಚ್ಚು ‌ಮತದಾರರು‌ ಇದ್ದಾರೆ. ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಮೊದಲ ಅಭ್ಯರ್ಥಿಯಾಗಿದ್ದಾರೆ. ಎರಡನೇ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧೆಗೆ ಅವಕಾಶ ಕೊಡಬೇಕು. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪರ ಲಖನ್ ಕೆಲಸ ಮಾಡಿದ್ದಾರೆ. ಮಹಾಂತೇಶ ಕವಟಗಿಮಠ, ‌ಲಖನ್ ಜಾರಕಿಹೊಳಿ ಇಬ್ಬರು ಗೆಲುವಿಗೆ ಶ್ರಮ‌‌‌ ವಹಿಸುತ್ತೇನೆ ಎಂದು ಹೇಳಿದ ಬಾಲಚಂದ್ರ ಜಾರಕಿಹೊಳಿ.

ಬಾಲಚಂದ್ರ ಜಾರಕಿಹೊಳಿ ಕೆ ಎಂಎಫ್ ಅಧ್ಯಕ್ಷ

ಜಾರಕಿಹೊಳಿ ಸಹೋದರರು ಸ್ವತಂತ್ರರು ಏನ ನಿರ್ಣಯ ಇದ್ದರು ಸ್ವತಂತ್ರರಾಗಿ‌ ನಿರ್ಣಯಿಸುತ್ತಾರೆ ಯಾರ ಮೇಲೂ ನಾವು ಡಿಪೆಂಡ ಇಲ್ಲ. ಬಿಜೆಪಿ ಪಕ್ಷದಿಂದ ಲಖನ್ ಜಾರಕಿಹೊಳಿ ಅವರಿಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳಿಲ್ಲ. ನಾನಂತೂ ಈಗಾಗಲೇ ಮಹಾಂತೇಶ ಕವಟಗಿಮಟ ಪರವಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದೇನೆ. ಈಗಾಗಲೇ ಪ್ರತಿ ತಾಲೂಕಿಗೂ ಹೋಗಿ ಪ್ರಚಾರ ಮಾಡುತ್ತಿದ್ದೇವೆ. ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಒಬ್ಬರೇ ಸ್ಪರ್ಧೆ ಮಾಡುತ್ತಾರೆ. ಮತ್ತೊಂದು ಬೆಂಬಲವನ್ನು ವರಿಷ್ಠರು ನಿರ್ಣಯದಂತೆ ನಡೆದುಕೊಳ್ಳಲಾಗುತ್ತದೆ. ಅವರು ಯಾರಿಗೆ ಬೆಂಬಲ ನೀಡುತ್ತೇವೆ ಅವರಿಗೆ ಬೆಂಬಲ ಸೂಚಿಸುತ್ತೇವೆ ಎನ್ನುತ್ತಾರೆ ರಮೇಶ ಜಾರಕಿಹೊಳಿ

ಗೋಕಾಕ ಶಾಸಕ ರಮೇಶ ಜಾರಕಿಹೊಳಿ‌

ಒಟ್ಟಿನಲ್ಲಿ ಲಖನ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೊ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೊ‌ ಕಾಯ್ದು ನೋಡಬೇಕಿದೆ. ಒಟ್ಟಾರೆಯಾಗಿ ಲಖನ ಜಾರಕಿಹೊಳಿ ಸ್ಪರ್ಧೆ ಮಾಡುವುದಂತು ಖಚಿತ. ಸ್ಪರ್ಧೆ ಮಾಡಿದ್ದೇ ಆದಲ್ಲಿ‌ ಜಾರಕಿಹೋಳಿ ಸಹೋದರರು ಒಟ್ಟಾಗಿ ಲಕ್ಷ್ಮೀ ಹೆಬ್ಬಾಳಕ ಸಹೋದರ ಚನ್ನರಾಜ ಹಟ್ಟಿಹೊಳಿಯನ್ನು ಸೋಲಿಸಲು ಸಹೋದರರು ಮುಂದಾಗಿದಂತು ನಿಜ.