ಉ.ಕ ಸುದ್ದಿಜಾಲ ಬೆಳಗಾವಿ :
ಪ್ರೀತಿಸಿ ಮದುವೆಯಾದವಳ ಅನೈತಿಕ ಸಂಬಂಧಕ್ಕೆ ಅಡ್ಡಿ : ಗಂಡನಿಗೆ ಚೆಟ್ಟ ಕಟ್ಟಿದ ಪತ್ನಿ! ತಂಪು ಪಾನೀಯದಲ್ಲಿ ಮೂರು ಸ್ಟ್ರಿಪ್ ನಿದ್ರೆ ಮಾತ್ರೆ ಕೊಟ್ಟಿದ್ದ ಹಂತಕ. ಮಾತ್ರೆ ಸೇವಿಸಿ ಕುಸಿದು ಬೀಳ್ತಿದ್ದಂತೆ ತುಂಬಿದ ಸಿಲಿಂಡರ್ ತಲೆ ಮೇಲೆ ಎದೆ,ತಲೆಗೆ ಹೊಡೆದು ಬರ್ಬರ ಕೊಲೆ.
ಬೆಳಗಾವಿ ಆನಗೋಳದ ಬಾಬಲೇ ಗಲ್ಲಿಯಲ್ಲಿ ಘಟನೆ. ಕೊಲೆ ಪ್ರಕರಣದಡಿ ಮೃತನ ಪತ್ನಿ, ಆಕೆಯ ಬಾಯ್ ಫ್ರೆಂಡ್ ಬಂಧಿಸಿ ಹಿಂಡಲಗಾ ಜೈಲಿಗಟ್ಟಿದ ಪೊಲೀಸರು. ಬೆಳಗಾವಿ ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಅವಿನಾಶ ಸೂಪ್ಪಣ್ಣವರ (40) ಕೊಲೆಯಾದವ.
ಕೊಲೆ ಪ್ರಕರಣದಡಿ ಅವಿನಾಶ ಪತ್ನಿ ಲಕ್ಷ್ಮಿ ಸೂಪಣ್ಣವರ, ಬಾಯ್ ಪ್ರೇಂಡ್ ಕೈಲಾಶ್ ಅಚ್ಚಿತಾಲ್ ಬಂಧನ. ಬೆಳಗಾವಿ ನಗರದ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಸುಸೈಡ್ ಕೇಸ್ ಎಂದು ನಾಟಕವಾಡಿದ್ದ ಅವಿನಾಶ ಪತ್ನಿ ಲಕ್ಷ್ಮೀ ಸೂಪಣ್ಣವರ. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಟಿಳಕವಾಡಿ ಠಾಣೆ ಮೆಟ್ಟಿಲೇರಿದ್ದ ಮೃತನ ತಾಯಿ ಕಮಲ್. ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಪತ್ನಿ ಲಕ್ಷ್ಮೀ ಮೇಲೆ ಅನುಮಾನ. ಕೊಲೆ ಮಾಡಿ ಮೂರು ದಿನ ಕಳೆದರೂ ಏನು ಗೊತ್ತಿಲ್ಲದಂತೆ ನಾಟಕವಾಡಿದ್ದ ಕೊಲೆಗಾತಿ ಲಕ್ಷ್ಮೀ.
ಕಳೆದ ಎರಡು ವರ್ಷಗಳಿಂದ ಕೈಲಾಶ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಲಕ್ಷ್ಮಿ. ಮೊಬೈಲ್ ಗೆ ರಿಚಾರ್ಜ್ ಮಾಡಿಸಲು ಹೋದಾಗ ಒಬ್ಬರಿಗೊಬ್ಬರು ಪೋನ್ ನಂಬರ್ ಶೇರ್. ಬಳಿಕ ಅವಿನಾಶ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದ ಕೈಲಾಶ.
ಇದನ್ನೇ ಬಂಡವಾಳ ಮಾಡಿಕೊಂಡು ಮನೆಯಲ್ಲಿ ಇಲ್ಲದಾಗ ಲಕ್ಷ್ಮಿ ಭೇಟಿಗೆ ಬರುತ್ತಿದ್ದ ಕೈಲಾಶ್. ಅವಿನಾಶ ಮನೆಯ ಅಣತಿ ದೂರದಲ್ಲೇ ಮೊಬೈಲ್ ಎಕ್ಸಸರೀಸ್ ಮಳಿಗೆ ಹೊಂದಿದ್ದ ಕೈಲಾಶ್. ಈ ಪರಿಚಯ ಸ್ನೇಹವಾಗಿ, ಕಳೆದ ಎರಡು ವರ್ಷಗಳಿಂದ ಇಬ್ಬರ ಮಧ್ಯೆ ಅನೈತಿಕ ಸಂಬಂಧ.
ಅನೈತಿಕ ಗೊತ್ತಾಗುತ್ತಿದ್ದಂತೆ ಪತ್ನಿ, ಆಕೆಯ ಸ್ನೇಹಿತನಿಗೂ ವಾರ್ನ್ ಮಾಡಿದ್ದ ಅವಿನಾಶ. ಇದೇ ಸಿಟ್ಟಿಗೆ ಪ್ರೀತಿಸಿ ಮದುವೆಯಾದ ಪತಿ ಅವಿನಾಶ ಕೊಲೆಗೆ ಸ್ಕೆಚ್ ಹಾಕಿದ್ದ ಲಕ್ಷ್ಮಿ. ಕಳೆದೊಂದು ತಿಂಗಳಿಂದ ಅವಿನಾಶ ಕೊಲೆಗೆ ಪ್ರಿಯಕರ ಕೈಲಾಶ್‌ಗೆ ಒತ್ತಡ ಹಾಕ್ತಿದ್ದ ಲಕ್ಷ್ಮಿ.
ಮಾರ್ಚ್ 6ರಂದು ಸಂಜೆ 4ಕ್ಕೆ ಮನೆಯಿಂದ ಕ್ಲಿನಿಕ್‌ಗೆ ಹೋಗಿದ್ದ ಅವಿನಾಶ. ಥೆರಪಿ ಮಸಾಜ್ ಮಾಡಿಸಿಕೊಳ್ಳಲು ಅವಿನಾಶ ಕ್ಲಿನಿಕ್‌ಗೆ ಹೋಗಿದ್ದ ಕೈಲಾಶ್. ಅವಿನಾಶ್ ಹಾಗೂ ಕೈಲಾಶ್ ಕ್ಲಿನಿಕ್‌ಗೆ ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ. ಹೋಗುವಾಗ ಎರಡು ತಂಪುಪಾನಿಯದಲ್ಲಿ ನಿದ್ರೆ ಮಾತ್ರೆ ಬೆರಸಿಕೊಂಡು ಹೋಗಿದ್ದ ಕೈಲಾಶ್.
ಮಸಾಜ್‌ಗೂ ಮುನ್ನ ಅವಿನಾಶಗೆ ತಂಪು ಪಾನೀಯ ಕುಡಿಯುವಂತೆ ಹೇಳಿರುವ ಕೈಲಾಶ್. ಕೈಲಾಶ್ ಕೊಟ್ಟ ತಂಪುಪಾನಿಯ ಕುಡಿಯುತ್ತಿದ್ದಂತೆ ಕುಸಿದು ಬಿದ್ದಿರುವ ಅವಿನಾಶ.
ಆಗ ಅಲ್ಲೇ ಇದ್ದ ಸಿಲಿಂಡರ್ ಎತ್ತಿ ಎದೆ, ತಲೆಗೆ ಹೊಡೆದು ಹತ್ಯೆ. ಗಂಡ ಸತ್ತಿದ್ದಾನೋ ಇಲ್ವೋ ಚೆಕ್ ಮಾಡೊದಕ್ಕೆ ವಿಡಿಯೋ ಕಾಲ ಮಾಡಿದ್ದ ಕೊಲೆಗಾರ ಕೈಲಾಶ್. ಇನ್ನೂ ಸತ್ತಿಲ್ಲ ಬದುಕಿದ್ದಾನೆಂದು ಹೇಳಿರುವ ಲಕ್ಷ್ಮೀ.
ಸ್ವಲ್ಪ ಹೊತ್ತು ಮೂಗು ಬಿಗಿಹಿಡಿ ಸಾಯುತ್ತಾನೆ ಎಂದು ಸಲಹೆ ಕೊಟ್ಟಿರೋ ಲಕ್ಷ್ಮಿ. ಈ ವೇಳೆ ಆತ ಸಾಯುತ್ತಿದ್ದಂತೆ ಮನೆಗೆ ಬಂದು ಏನು ಗೊತ್ತಿಲ್ಲದಂತೆ ಗೋಳಾಟ. ಶುಗರ್ ಹೆಚ್ಚಾಗಿ ಕುಸಿದು ಬಿದ್ದು ತಲೆಗೆ ಪೆಟ್ಟಾಗಿ ಸಾವನಪ್ಪಿರುವ ಬಗ್ಗೆ ಕಥೆ . ಆದರೆ ಸಾವಿನ ಬಗ್ಗೆ ಅನುಮಾನಗೊಂಡು ತಕ್ಷಣವೇ ಪೊಲೀಸರ ಮೊರೆ ಹೋಗಿದ್ದ ಅವಿನಾಶ ತಾಯಿ.
ಮರಣೋತ್ತರ ಪರೀಕ್ಷೆ ನಡೆಸಿದಾಗ ಇದು ಸಹಜ ಸಾವಲ್ಲ, ಕೊಲೆ ಎಂಬುದು ಸಾಬೀತು. ಪೊಲೀಸರ ತಮ್ಮದೇ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿಸಿರುವುದಾಗಿ ತಪ್ಪೊಪ್ಪಿಗೆ. ಆಗ ಕೈಲಾಶ್ ವಶಕ್ಕೆ ಪಡೆದಾಗ ಲಕ್ಷ್ಮಿ ಮಾತು ಕೇಳಿ ಕೊಲೆಗೈದಿರುವುದಾಗಿ ಒಪ್ಪಿಗೆ. ಇಬ್ಬರನ್ನೂ ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಿದ ಟಿಳಕವಾಡಿ ಠಾಣೆ ಪೊಲೀಸರು.

