ಉ.ಕ ಸುದ್ದಿಜಾಲ ಮೋಳೆ :

ಬೆಳಗಾವಿ ಜಿಲ್ಲೆ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೋಳೆ ಗ್ರಾಮಕ್ಕೆ ಪ್ರಸ್ತುತ 33/11 ಕೆ.ವಿ. ವಿದ್ಯುತ್ ಉಪ ಕೇಂದ್ರ ಮುರಗುಂಡಿ ದಿಂದ ಎ.ಪಿ.ಎಲ್, ಪೀಡ‌ ವಿದ್ಯುತ್‌ ಸರಬರಾಜ ಆಗುತಿದ್ದು, ಸದರಿ ವಿದ್ಯುತ್‌ ಮಾರ್ಗದಲ್ಲಿ ಆನೇಕ ಗ್ರಾಮಗಳು ಸಂಪರ್ಕ ಇರುವರಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಿರುತ್ತದೆ.

ಈ ಬಗ್ಗೆ ಕಾಗವಾಡ ಶಾಸಕ‌ ಶ್ರೀಮಂತ ಪಾಟೀಲ ಅವರಿಗೂ ಕೂಡಾ ಮೋಳೆ ಗ್ರಾಮಸ್ಥರಿಂದ ಮನವಿ ಸಲ್ಲಿಸಲಾಗಿತ್ತು ಈ ಬಗ್ಗೆ ಶಾಸಕ ಶ್ರೀಮಂತ ಪಾಟೀಲ ಮಾತನಾಡಿ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ತುಂಬ ತೊಂದರೆಯಾಗುತ್ತಿದ್ದು, ಈ ಕುರಿತು ಮೋಳೆ ಗ್ರಾಮಸ್ಥರಿಂದ ಅನೇಕ‌ ಬಾರಿ ನಮ್ಮ ಕಛೇರಿಗೆ ಬಂದು‌ಮನವಿ‌ಕೂಡಾ ಸಲ್ಲಿಸಿದರು.

ಈ ವಿಷಯ ನನ್ನ ಗಮನಕ್ಕೆ ತಂದ್ದಿದು ಈ ತೊಂದರೆಯನ್ನು ನಿಗಿಸುಲು ಇಗಿರುವ 33 ಕೆ.ಎ. ಮುರಗುಂಡಿ ವಿದ್ಯುತ್ ಉಪ-ಕೇಂದ್ರದಿಂದ ಹೊರಡುವ ಎ.ಪಿ.ಎಲ್. ಫೀಡರ್ ಬದಲಾಯಿಸಿ 110/11 ಕೆ.ವಿ, ಐನಾಪೂರ ವಿದ್ಯುತ್‌ ಉಪ-ಕೇಂದ್ರ ದಿಂದ ನಿರಂತರ ಜ್ಯೋತಿ ಪ್ರತ್ಯೇಕವಾಗಿ ಮಾರ್ಗ ನಿರ್ಮಿಸಿ ವಿದ್ಯುತ್‌ ಸರಬರಾಜ ಮಾಡಲು ಮನವಿಯನ್ನು ಸಲ್ಲಿಸಿರುತ್ತಾರೆ.

ಆದುದರಿಂದ ಈ ಹಿನ್ನಲೆಯಲ್ಲಿ ಮೋಳೆ ಗ್ರಾಮಕ್ಕೆ ಪ್ರಸ್ತುತವಿರುವ 110/11 ಕೆ.ವಿ. ವಿದ್ಯುತ್ ಉಪ-ಕೇಂದ್ರ ಐನಾಪೂರದಿಂದ ನಿರಂತರ ಜ್ಯೋತಿ ಮಾರ್ಗದ ಕಾಮಗಾರಿಯನ್ನು ತೆಗೆದುಕೊಳ್ಳ ಬೇಕೆಂದು ಹಾಗೂ ಸುತ್ತಮುತ್ತಲ್ಲಿನ ರೈತರಿಗೆ, ವ್ಯಾಪಾರಸ್ಥರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ಮಾಡಕೊಡಬೇಕೆಂದು ಮನವಿ ಪತ್ರದ ಮೂಲಕ ಹುಬ್ಬಳ್ಳಿ ವಿದ್ಯುತ್ ಸರಬರಾಜ ಮಂಡಳಿಗೂ ತಿಳಿಸಲಾಗಿದೆ ಎಂದರು.

ವಿದ್ಯತ್ ತೊಂದರೆ ಬಗ್ಗೆ ಮೋಳೆ ಗ್ರಾಮದ ಮುಖಂಡರು ಐನಾಪೂರ, ಉಗಾರ ಹಾಗೂ ಅಥಣಿ ವಿದ್ಯುತ್ ಕಛೇರಿಗೆ ಬೇಟಿ ನೀಡಿ ಮನವಿ ಸಲ್ಲಿಸಿದ್ದಾರೆ. ಕಾರ್ಯನಿರ್ವಾಹಕ ಅಭಿಯಂತರಾದ ಸಿ. ಬಿ. ಯಂಕಚ್ಚಿ ಸಾಕಾರಾತ್ಮಕವಾಗಿ ಸ್ಪಂದಿಸಿದರು. ಈ ಸಂಧರ್ಭದಲ್ಲಿ ಈ ಸಂದರ್ಭದಲ್ಲಿ ಬಿ. ಪಿ.ಟೋಪಾಗಿ, ಡಿ. ಎಸ್. ಸಾವಂತ್, ಕಾಂತು ಬಡಿಗೇರ್, ದೌಲತ್ ಬೋರಗಂವೆ, ಅಡಿವೆಪ್ಪ ಮಿರ್ಜೆ, ಸಿದಗೊಂಡ ಪೂಜೇರಿ, ಸಾವಂತ್ ಮಾಳಿ ಮತ್ತಿತರರು ಉಪಸ್ಥಿತರಿದ್ದರು.