ಉ.ಕ‌ ಸುದ್ದಿಜಾಲ ಗದಗ :

ಗದಗ ನಗರದ ಗಂಗಿಮಡಿ ಬಡಾವಣೆ ನಿವಾಸಿಯಾಗಿದ್ದ ಶೋಭಾ ಲಮಾಣಿ ಅಲಿಯಾಸ್ ಮಿನಾಜ್ ಬೇಪಾರಿ ಕೊಲೆಯಾದ ಮಹಿಳೆ.. ಹಳೆಯ ದ್ವೇಷದ ಹಿನ್ನೆಲೆ ಚೇತನ್ ಕುಮಾರ್  ಹಾಗೂ ರೋಹನ್ ಕುಮಾರ್ ಹತ್ಯೆ ಮಾಡಿದ್ದಾರೆ.

ಗದಗ ನಗರದ ಮುಳಗುಂದ ನಾಕಾ ಬಳಿಯ ಎಸ್ ಬಿ ಬೇಕರಿ ಎದುರು ಮಹಿಳೆಯ ಕೊಲೆ ನಡೆದಿದ್ದು ಗದಗ ಬೆಟಗೇರಿ ಜನರು ಬೆಚ್ಚಿಬೀಳುವಂತಾಗಿದೆ. ಕೊರ್ಟ್ ಕಲಾಪ ಮುಗಿಸಿಕೊಂಡು ಆಟೋ ಏರಿ ಮಧ್ಯಾಹ್ನ 3:30 ರ ಸುಮಾರು ನಗರದ ಎಸ್ ಬಿ ಬೇಕರಿ ಬಳಿ ಬಂದಾಕೆಯ ಕತ್ತು ಸೀಳಿ ಕೊಲೆ ನಡೆದಿದೆ.

ಶೋಭಾ ಮಗುವಿಗಾಗಿ ಬೇಕರಿ ತಿನಿಸು ಖರೀದಿಸಲು ಬೇಕರಿಗೆ ಬಂದಿದ್ದಳು ಅಲ್ಲೇ ಕಾಯ್ದು ಕೂತಿದ್ದ ಇಬ್ವರು ಚಾಕುವಿನಿಂದ ಕತ್ತು ಸೀಳಿಸಿದ್ದಾರೆ. ಪ್ರತಿರೋಧವೊಡ್ಡಿದಾಗ ಕೈಗೆ ಚೂರಿ ಏಟು ಬಿದ್ದ ಗಾಯಗಳಾಗಿವೆ. ಸದ್ಯ ಘಟನೆ ಸಂಬಂಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಕೊಲೆಯಾದ ಮಹಿಳೆ ಶೋಭಾ

ಗದಗ ನಗರದ ಗಂಗಿಮಡಿಯಲ್ಲಿ 2020 ರಲ್ಲಿ ರಮೇಶ್ ಕುಮಾರ್ ಎಂಬಾತನ ಕೊಲೆ ನಡೆದಿದ್ದು. ಕೊಲೆ ಕೇಸ್ ವಿಚಾರವಾಗಿ ಶೋಭಾ ಅಲಿಯಾಸ್ ಮಿನಾಜ್ ಹಾಗೂ ಗಂಡ ವಾಸೀಂ ಬೇಪಾರಿ ಈ ಕೊಲೆಯಲ್ಲಿ ಭಾಗಿಯಾಗಿದ್ರು. ಕಳೆದ ಕೆಲ ದಿನಗಳ ಹಿಂದೆ ಬೇಲ್ ಮೇಲೆ ಇಬ್ಬರು ಆಚೆ ಬಂದಿದ್ರು. ಬೇಲ್ ಆದನಂತ್ರ ಇಬ್ಬರು ಹುಬ್ಬಳ್ಳಿಯಲ್ಲಿ ವಾಸವಿದ್ರು.

ಕೋರ್ಟ್ ಕಲಾಪ ಇದ್ದಾಗ ಗದಗ ನಗರಕ್ಕೆ ಭೇಟಿ ಕೊಡ್ತಿದ್ರು. ಇಂದು ಕೇಸ್ ವಿಚಾರಕ್ಕೆ ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಶೋಭಾ ಬಂದಿದ್ರು ಎನ್ನಲಾಗಿದೆ‌‌. ಇದೇ ವೇಳೆಗೆ ಕಾಯುತ್ತಿದ್ದ ಚೇತನ್ ಕುಮಾರ್, ರೋಹನ್ ಕುಮಾರ್ ಹತ್ಯೆ ಮಾಡಿದ್ದಾರೆ.