ಉ.ಕ ಸುದ್ದಿಜಾಲ ಬೆಳಗಾವಿ :

ಎಡಿಜಿಪಿ ಅಲೋಕ‌ಕುಮಾರ ಅವರೇ ನಾವು ಯಾವ ದೇಶದಲ್ಲಿ ಇದ್ದೀವಿ ನಾವು? 75 ವರ್ಷ ಆಯ್ತು ಸ್ವಾತಂತ್ರ್ಯ ಸಿಕ್ಕು ಸ್ವಾತಂತ್ರ್ಯ ನಮಗೆ ಸಿಗಬೇಕಾದ್ರೆ ತಿಲಕ್‌, ಸಾವರ್ಕರ್ ಕಾರಣ ಎಂಬುದು ನಿಮಗೆ ಗೊತ್ತಿಲ್ವಾ? ಎಲ್ಲದಕ್ಕೂ ಪರ್ಮಿಷ‌ನ್ ತಗೆದುಕೊಳ್ಳಬೇಕಾ? ಸಾವರ್ಕರ್ ತಮ್ಮ ಆಯುಷ್ಯದಲ್ಲಿ ಅರ್ಧ ಆಯುಷ್ಯ ಜೈಲಿನಲ್ಲಿ ಕಳೆದ ವ್ಯಕ್ತಿ ಸ್ವಾತಂತ್ರ್ಯದಲ್ಲಿ ಹೋರಾಟ ಮಾಡಿದ ವ್ಯಕ್ತಿಗಾಗಿ ಪರ್ಮಿಷನ್ ತಗೆದುಕೊಳ್ಳಬೇಕಾ ನಾವು? ತಾವು ಕ್ಷಮೆ ಕೇಳಬೇಕು ಅಂತಾ ನಾನು ಹೇಳುತ್ತಿದ್ದೇನೆ.

ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ‌

ಈ ರೀತಿ ನಿಮ್ಮ ಹೇಳಿಕೆಯಿಂದ ದೇಶಭಕ್ತಿ, ಸ್ವಾತಂತ್ರ್ಯ, ಸಂವಿಧಾನ ಮೇಲೆ ಪರಿಣಾಮ ಆಗುತ್ತದೆ. ಈ ರೀತಿಯ ನಿಮ್ಮ ಹೇಳಿಕೆ ಸರಿಯಲ್ಲ, ದೇಶಭಕ್ತರಿಗೆ ಅವಮಾನ ಮಾಡ್ತಿದೀರಿ ನೀವು ಸಾವರ್ಕರ್ ಬಗ್ಗೆ ವಿರೋಧ ಮಾಡ್ತಾರಂದ್ರೆ ಅರ್ಥ ಸಾವರ್ಕರ್ ದೇಶಭಕ್ತಿ ಕಡಿಮೆ ಆಗಿಲ್ಲ, ಆಗೋದೂ ಇಲ್ಲ. ನೀವು ನಿಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು. ಈ ರೀತಿ ಹೇಳಿಕೆ ಎಂದೂ ಕೊಡಲು ಹೋಗಬೇಡಿ 75 ವರ್ಷ ಸ್ವಾತಂತ್ರ್ಯದ ಇತಿಹಾಸದಲ್ಲಿ ಮಹಾಪುರುಷರ ಫೋಟೋ ಹಾಕಿ ದೇಶಭಕ್ತಿ ತೋರಿಸುವ ಕೆಲಸ ಮಾಡ್ತಿದೀವಿ. ಅದಕ್ಕೆ ಕಲ್ಲು ಹಾಕಕ್ಕೋಗಬೇಡಿ, ಇದನ್ನ ಖಂಡಿಸುತ್ತೇನೆ, ವಿರೋಧಿಸುತ್ತಿದ್ದೇನೆ ಎಂದು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ‌ ಹೇಳಿದ್ದಾರೆ.