ಉ.ಕ ಸುದ್ದಿಜಾಲ ವಿಜಯಪುರ‌ :

ಚಾಲಕನ ನಿಯಂತ್ರಣ ತಪ್ಪಿ ಕುರಿಗಾಯಿ ಹಾಗೂ ಕುರಿಗಳ ಮೇಲೆ ಹರಿದ ಲಾರಿ ಈ ದುರ್ಘಟನೆಯಲ್ಲಿ ಓರ್ವ ಕುರಿಗಾಯಿ ಯುವಕ ಹಾಗೂ 15ಕ್ಕೂ ಹೆಚ್ಚು ಕುರಿಗಳ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಯುಕೆಪಿ ಬಳಿ ನಡೆದಿದೆ.

ರಾಮು ಗೊಲ್ಲರ್ (20) ಮೃತಪಟ್ಟ ದುರ್ದೈವಿ. ಸ್ಥಳದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ. ಲಾರಿ ಚಾಲಕನ ಅಜಾಗರೂಕತೆ, ಅತಿವೇಗದ ಚಾಲನೆ ಕಾರಣ ನಿಯಂತ್ರಣ ತಪ್ಪಿದ ಸಿಮೆಂಟ್ ತುಂಬಿದ್ದ ಲಾರಿ. ಅಪಘಾತದ ಬಳಿಕ ಲಾರಿಯನ್ನ ಪಟ್ಟಣದ ಕೋರಮ್ಮ ದೇಗುಲ ಬಳಿ ತಡೆದು ನಿಲ್ಲಿಸಿದ ಸ್ಥಳೀಯರು. ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.