ಉ.ಕ ಸುದ್ದಿಜಾಲ ಮೈಸೂರ :

ವಿದ್ಯಾರ್ಥಿನಿಯರ ಮೇಲಿನ ಸ್ವಾಮೀಜಿಗಳ ಲೈಂಗಿಕ ಆರೋಪ ಪ್ರಕರಣ ಕಾನೂನಾತ್ಮಕ ತನಿಖೆ ಕುರಿತು ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಶಾಸಕ ಡಾ. ಯತಿಂದ್ರ ಸಿದ್ದರಾಮಯ್ಯ.

ಮುರುಘ ಮಠ ಜಾತಿ ವ್ಯವಸ್ಥೆಯನ್ನು ವಿರುದ್ಧ ಹೋರಾಡಿದ ಮಠ. ಕಾನೂನಾತ್ಮಕ ತನಿಖೆಯಾಗಿ ಸಂತ್ರಸ್ತೆಯರಿಗೆ ನ್ಯಾಯ ದೊರಕುವಂತಾಗಲಿ. ಮುರುಘಾ ಮಠ ಪ್ರಗತಿಪರ ಚಿಂತನೆಯ, ಜಾತಿ ವ್ಯವಸ್ಥೆಯನ್ನು ವಿರುದ್ಧ ಹೋರಾಡಿದ ಇತಿಹಾಸವುಳ್ಳ ಮಠ. ಆದರೆ, ಈಗ ಮಠದ ಸ್ವಾಮಿಗಳ ಮೇಲೆ ಲೈಂಗಿಕ ಶೋಷಣೆಯ ಗಂಭೀರ ಆರೋಪ ಬಂದಿದೆ.

ಅದೂ ಅಪ್ರಾಪ್ತ ಬಾಲಕಿಯರಿಂದ ಆರೋಪ ಬಂದಿದೆ. ಈ ಪ್ರಕರಣದಲ್ಲಿ ಸೂಕ್ತ ಕಾನೂನಾತ್ಮಕ ತನಿಖೆಯಾಗಿ ಸಂತ್ರಸ್ತೆಯರಿಗೆ ನ್ಯಾಯ ದೊರಕುವಂತಾಗಲಿ. ಎಂದು ಟ್ವಿಟ್ ಮಾಡಿರುವ ಶಾಸಕ ಡಾ.ಯತಿಂದ್ರ ಸಿದ್ದರಾಮಯ್ಯ.