ಉ.ಕ ಸುದ್ದಿಜಾಲ ಗದಗ :
ಆಸ್ತಿಗಾಗಿ ತಕರಾರು ತೆಗೆದ ತಂಗಿಯನ್ನೇ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿ ಘಟನೆ ನಡೆದಿದೆ.
ಕಾಳಮ್ಮ ಕ್ಯಾದಿಗೆಹಳ್ಳಿ (35) ಅಲಿಯಾಸ್ ಖುರ್ಷಿದಾ ಹತ್ಯೆಯಾದ ಮಹಿಳೆ.. ಕಾಳಮ್ಮನ ಅಣ್ಣ ಈಶ್ವರಪ್ಪ ಕ್ಯಾದಿಗೇಹಳ್ಳಿಯಿಂದಲೇ ಹತ್ಯೆ. ಆಸ್ತಿ ವ್ಯಾಜ್ಯ ವಾಪಾಸ್ ಪಡೆಯುವಂತೆ ಕೇಳಲು ಮನೆಗೆ ಹೋಗಿದ್ದ ಈಶ್ವರಪ್ಪ. ಮಾತು ಕೇಳದಿದ್ದಕ್ಕೆ ಚಾಕುವಿನಿಂದ ಚುಚ್ಚಿ ತಂಗಿಯ ಹತ್ಯೆ ಮಾಡಲಾಗಿದೆ.
ಚಾಕುವಿನಿಂದ ಆರು ಬಾರಿ ಇರಿದು ಬಳಿಕ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಮುಂಡರಗಿ ತಾಲೂಕಿನ ಬೆಣ್ಣಿಹಳ್ಳಿಯಲ್ಲಿ 15 ಎಕರೆ ಜಮೀನು ವಿಚಾರವಾಗಿ ಜಗಳ ನಡೆದಿದೆ. ಪಿತ್ರಾರ್ಜಿತ ಆಸ್ತಿಗಾಗಿ ಕೇಸ್ ದಾಖಲಿಸಿದ್ದ ಕಾಳಮ್ಮ ಅಲಿಯಾಸ್ ಖುರ್ಷಿದಾ..
ಕಳೆದ ನಾಲ್ಕು ವರ್ಷದ ಹಿಂದೆ ಮೆಹಬೂಬ್ ಬೆಟಗೇರಿ ಎಂಬಾತನೊಂದಿಗೆ ಮದುವೆಯಾಗಿದ್ದ ಕಾಳಮ್ಮ. ಮೆಹಬೂಬ್ ಜೊತೆ ಮದುವೆಯಾಗಿ ತಂದೆಕೊಟ್ಟಿದ್ದ ಚಿಕ್ಕ ಮನೆಯಲ್ಲಿದ್ದ ಕಾಳಮ್ಮ ಮುಸ್ಲಿಂ ವ್ಯಕ್ತಿಯನ್ನ ಮದ್ವೆಯಾಗಿ ಖುರ್ಷಿದಾ ಅಂತಾ ಹೆಸರು ಬದಲಿಸಿಕೊಂಡಿದ್ದ ಕಾಳಮ್ಮ..
ಇದಕ್ಕೂ ಮುನ್ನ 14 ವರ್ಷದ ಹಿಂದೆ ಕಟಿಂಗ್ ಸಲೂನ್ ಓನರ್ ಪ್ರೀತಿಸಿ ಮದುವೆಯಾಗಿ ಡೈವೋರ್ಸ್ ಓರ್ವ ಮಗನನ್ನ ಹೆತ್ತು ತಂದೆಯ ಬಳಿ ಬಿಟ್ಟು ಡೈವೋರ್ಸ್ ಮಾಡಿಕೊಂಡಿದ್ದ ಕಾಳಮ್ಮ, ಡೈವೋರ್ಸ್ ಬಳಿಕ ತನಗಿಂತ ಕಿರಿಯ ವಯಸ್ಸಿನ ಮುಸ್ಲಿಂ ಯುವಕನ ಜೊತೆ ಮದುವೆಯಾಗಿದ್ದಳು ಕಾಳಮ್ಮ.
ಈಗ ಆಸ್ತಿಗಾಗಿ ಅಣ್ಣನ ಜೊತೆಗೆ ತಗಾದೆ ತೆಗೆದಿದ್ದ ಮಹಿಳೆ ಮದ್ವೆಯಾಗಿ ಹೋಗಿದ್ದೀಯಾ ಈಗ ಆಸ್ತಿ ಮೇಲೇಕೆ ಕಣ್ಣು ಅಂತಾ ಅಣ್ಣ ಈಶ್ವರಪ್ಪ ಪ್ರಶ್ನೆ. ಈಗ ಆಸ್ತಿ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಈ ಕುರಿತು ಮುಂಡರಗಿ ಪೊಲೀಸರಿಂದ ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.