ಉ.ಕ ಸುದ್ದಿಜಾಲ ವಿಜಯಪುರ :
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಸಭಾಪತಿ ಯು.ಟಿ ಖಾದರ್‌ಗೆ ಪತ್ರ ಬರೆದ ಶಾಸಕ ಯತ್ನಾಳ್ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.. ಮೊದಲ ದಿನದಿಂದಲೇ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶ ನೀಡುವಂತೆ ಪತ್ರ ಬರೆದಿದ್ದಾರೆ.
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ತಾರತಮ್ಯ ನಿವಾರಿಸಬೇಕು. ಪ್ರತಿ ಅಧಿವೇಶನದಲ್ಲೂ ಉತ್ತರ ಕರ್ನಾಟಕದ ಬಗ್ಗೆ ಕೊನೆಯಲ್ಲಿ ಚರ್ಚೆ ಮಾಡಲಾಗುತ್ತೆ… ಕೊನೆಯ ದಿನದಲ್ಲಿ ಶಾಸಕರ ಹಾಜರಾತಿ ಕಡಿಮೆ ಇರುತ್ತದೆ…
ಸರಿಯಾಗಿ ಚರ್ಚೆಯೇ ನಡೆಯಲ್ಲ ಎಂದು ಅಸಮಾಧಾನ ಹೊರಹಾಕಿದ ಯತ್ನಾಳ್. ಉತ್ತರ ಕರ್ನಾಟಕದ ಬಗೆಗಿನ ತಾರತಮ್ಯಕ್ಕೆ ಪತ್ರದಲ್ಲಿ ಯತ್ನಾಳ್ ಅಸಮಾಧಾನ…
ಉತ್ತರ ಕರ್ನಾಟಕ ರೈತರ ಸಮಸ್ಯೆ, ಕೈಗಾರಿಕೆ, ಶೈಕ್ಷಣಿಕ ಕುರಿತಾಗಿ ಮೊದಲೆ ದಿನವೇ ಚರ್ಚೆ ಮಾಡುವಂತೆ ಯತ್ನಾಳ್ ಒತ್ತಾಯ ಮಾಡಿ ಸಭಾಪತಿ ಯು ಟಿ ಖಾದರ ಅವರಿಗೆ ಪತ್ರ ಬರೆದಿದ್ದಾರೆ.
