ಉ.ಕ ಸುದ್ದಿಜಾಲ ರಾಮನಗರ :

ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿ ಬಳಿ ಎರಡು ದಿನದ ಹಿಂದೆ ಅಪಘಾತ ಸಂಭವಿಸಿದ್ದು, ಚಿಕಿತ್ಸೆ ಫಲಾಕಾರಿಯಾಗದೇ ಬೈಕ ಸವಾರ ಸಾವನಪ್ಪಿದ್ದಾನೆ.

ಬೈಕ್ ಸ್ಕಿಡ್ ಆಗಿ ರಾಮನಗರ ತಾಲೂಕಿನ ಅಬ್ಬನಕುಪ್ಪೆ ಗ್ರಾಮದ ಆನಂದ್ (33) ಸಾವು. ಕೈಗಾರಿಕಾ ಸಂಸ್ಥೆಗಳು ರಸ್ತೆ ಹಾಳು ಮಾಡಿರುವ ಆರೋಪ. ರಸ್ತೆಯಲ್ಲೇ ಶವ ಇಟ್ಟು ಗ್ರಾಮಸ್ಥರ ಪ್ರತಿಭಟನೆ. ಬಿಡದಿ ಕೈಗಾರಿಕೆ ಸಂಘದ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮೃತ ಕುಟುಂಬಕ್ಕೆ ಪರಿಹಾರ ನೀಡಿ ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ.