ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರೇಣುಕಾ ಸಕ್ಕರೆ ಕಾರ್ಖಾನೆ ಕಬ್ಬು ತೂಕದ ಯಂತ್ರದಲ್ಲಿ ಮೋಸ ಕಂಡುಬಂದಿದ್ದು ರೈತರು ಆಕ್ರೋಶ ಹೊರಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೇಣುಕಾ ಕಾರ್ಖಾನೆಯ ಕಬ್ಬು ತೂಕದಲ್ಲಿ ಮೋಸ ; ರೊಚ್ಚಿಗೆದ್ದ ರೈತರ ಆಕ್ರೋಶ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮ ರೇಣುಕಾ ಸಕ್ಕರೆ ಕಾರ್ಖಾನೆಯ ತೂಕದ ತಂತ್ರದಲ್ಲಿ ಮೋಸ ಆಗಿದೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.

ರೈತರ ಬೆಳೆಗೆ ಈ ರೀತಿ ಮೋಸ ಮಾಡುವ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ. ಕಣ್ಮುಚ್ಚಿ ಕುಳಿತ ಅಧಿಕಾರಿಗಳಿಗೆ ರೈತರು ಹಿಡಿಶಾಪ ಹಾಕುತ್ತಿದ್ದಾರೆ.

ಹಲವು ದಿನಗಳಿಂದ ತೂಕದಲ್ಲಿ ಕಡಿಮೆ ಬರುತ್ತಿದೆ ಎಂದು ಆರೋಪ ಹಲವು ಚಾಲಕರಿಂದ ಕಾರ್ಖಾನೆ ಮೇಲೆ ಗಂಭೀರ ಆರೋಪ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುವಂತೆ ರೈತ ಮನವಿ ಸಾಮಾಜಿಕ ಜಾಣತಗಳಲ್ಲಿ ವೈರಲಾಗುತ್ತಿರುವ ವಿಡಿಯೋ…