ಉ.ಕ ಸುದ್ದಿಜಾಲ :
ತಿರುಪತಿ ತಿಮ್ಮಪ್ಪನಿಗೆ ಮಡಿಕೊಟ್ಟ ಶಿವರಾಜಕುಮರ ಕುಟುಂಬ ಡಾ.ರಾಜ್ಕುಮಾರ್ ಕೂಡ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಯ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಮೊದಲಿಂದಲೂ ಅಣ್ಣಾವ್ರ ಕುಟುಂಬ ಸಿನಿಮಾಗಳ ಜೊತೆ ಜೊತೆಗೆ ದೈವ ಭಕ್ತಿಗೆ ಹೊತ್ತು ಕೊಡುತ್ತಾರೆ. ಇದೀಗ ಶಿವಣ್ಣ ದಂಪತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮುಡಿ ಕೊಟ್ಟಿದ್ದಾರೆ.
ಡಾ.ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಇಬ್ಬರು ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ಇಂದು ಬೆಳಗಿನ ಜಾವ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿ, ದರ್ಶನ ಪಡೆದುಕೊಂಡ ಬಳಿಕ ಮುಡಿ ಕೊಟ್ಟಿದ್ದಾರೆ.
ಶಿವಣ್ಣನ ಜೊತೆ ಗೀತಾ ಶಿವರಾಜ್ಕುಮಾರ್ ಕೂಡ ಮುಡಿ ಕೊಟ್ಟಿದ್ದಾರೆ. ಇದೇ ವೇಳೆ ಶಿವಣ್ಣ ದಂಪತಿ ಜೊತೆ ಕುಟುಂಬಸ್ಥರು, ಆಪ್ತ ಗೆಳೆಯರು ಕೂಡ ಇದ್ದರು.
ಇನ್ನು ಶಿವರಾಜ್ಕುಮಾರ್ ಅವರಿಗೆ ಕೊಂಚ ಅನಾರೋಗ್ಯ ಇರುವ ಕಾರಣ ಇದೇ ತಿಂಗಳು ಚಿಕಿತ್ಸೆಗೆಂದು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇದಕ್ಕೂ ಮೊದಲೇ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡು ಮುಡಿ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.