ಉ.ಕ ಸುದ್ದಿಜಾಲ ಚಿಕ್ಕೋಡಿ :
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮ್ರಾಣಿ ಗ್ರಾಮದಲ್ಲಿ ಕುಡಿತದ ದಾಸಕ್ಕೆ ಒಳಗಾಗಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತ್ನಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ಹೇಳಿದರು.
ಪತಿಯನ್ನೆ ಕೊಂದ ಪತ್ನಿ ಈ ಬಗ್ಗೆ ಬೆಳಗಾವಿ ಎಸ್‌ಪಿ ಭೀಮಾಶಂಕರ ಗುಳೇದ ಪ್ರತಿಕ್ರಿಯೆ
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಡಿ.10 ಶ್ರೀಮಂತ ಇಟ್ನಾಳ್ ನನ್ನು ಆತನ ಪತ್ನಿ ಸಾವಿತ್ರಿ ಕೊಲೆ ಮಾಡಿದ್ದಾಳೆ. ಕೊಲೆ ಮಾಡಿ ಪತಿಯ ಶವವನ್ನು ಎರಡು ತುಂಡು ಮಾಡಿ ದೇಹ ಸಾಗಾಟ ಮಾಡಿದ್ದಳು. ಮನೆಯಲ್ಲಿ ಬಿದ್ದ ರಕ್ತದ ಕಲೆಗಳನ್ನು ಶುಚಿಗೊಳಿಸಿದ್ದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದರು.
ಅಥಣಿ ತಾಲೂಕಿ ಚಿಕ್ಕೋಡ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ. ಸುವರ್ಣ ಮಠಪತಿ ಕೊಲೆಯಾದ ಗರ್ಭಿಣಿ. ಪೊಲೀಸರಿಗೆ ಪ್ರಾರಂಭದಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅಥಣಿ ಪೊಲೀಸರು ಸತತ ಪ್ರಯತ್ನದಿಂದ ಮೂರು ದಿನದ ಬಳಿಕ ಆರೋಪಿ ಅಪ್ಪಯ್ಯ ಮಠಪತಿ ಬಂಧಿಸಲಾಗಿದೆ ಎಂದರು.
ಕೊಲೆಯಾದ ಸುವರ್ಣ ಹಲವಾರು ಬಾರಿ ಅಪ್ಪಯ್ಯಗೆ ಸಾಲ ಕೊಟ್ಟಿರುತ್ತಾಳೆ. ಕೇಳಿದ ಸಾಲ ಮರಳಿ ಕೊಡುವಂತೆ ಕೇಳಿದಾಗ ಸುವರ್ಣನನ್ನು ಕೊಲೆ ಮಾಡಿ ಪರಾರಿಯಾಗಿದ್ದನ್ನು ಎಂದರು.
ಡಿ.24 ರಂದು ಯರಗಟ್ಟಿ ಗೋಪಾಲ ಮಾರಿಹಾಳ ಎಂಬ ವ್ಯಕ್ತಿಯನ್ನು ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಿದ್ದ ಇಬ್ಬರ ಸಹೋದರರ ಮುರುಗೋಡ ಪೊಲೀಸರು ಬಂಧಿಸಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಗಲಾಟೆಯಾಗಿದೆ. ಗೋಪಾಲ ಕುಡಿದ ಮತ್ತಿನಲ್ಲಿ ಕೊಲೆಯಾದ ಗೋಪಾಲ ಸಹೋದರ ಮಾರುತಿಯನ್ನು ಪೊಲೀಸರು ಬಂಧಿಸಿದ್ದಾರೆ.