ಉ.ಕ ಸುದ್ದಿಜಾಲ ಬೆಳಗಾವಿ :
ಮೊಟ್ಟ ಮೊದಲ ವಿದ್ಯುತ್ ಚಾಲಿತ ರೈಲು ಸಂಚಾರ ನ.29ಕ್ಕೆ ಬೆಂಗಳೂರಿನಿಂದ ಬೆಳಗಾವಿಗೆ ಬರಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಬೆಳಗಾವಿ – ಹುಬ್ಬಳ್ಳಿ ನಡುವೆ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ನ.29ರಂದು ರೈಲು (ಸಂಖ್ಯೆ:20653) ಬೆಂಗಳೂರು–ಬೆಳಗಾವಿ ಸೂಪರ್ ಫಾಸ್ಟ್ ಏಕ್ಸ್‌ಪ್ರೆಸ್ ರೈಲು ಡೀಸೆಲ್ ಎಂಜಿನ್ ಬದಲು ಎಲೆಕ್ಟ್ರಿಕ್ ಎಂಜಿನ್ ಮೂಲಕ ಸಂಚಾರ ನಡೆಸಲಿದೆ.
ನ.30ರಂದು ರೈಲು (ಸಂಖ್ಯೆ:20654) ಬೆಳಗಾವಿ ರೈಲು ನಿಲ್ದಾಣದಿಂದ ಮೊಟ್ಟ ಮೊದಲ ವಿದ್ಯುತ್ ಚಾಲಿತ ರೈಲು ಪ್ರತಿದಿನ ಸಂಚಾರ ನಡೆಸಲಿದೆ. ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಬರುವಂತಹ ದಿನಗಳಲ್ಲಿ ಪ್ರಯಾಣಿಕರಿಗೆ ಕಡಿಮೆ ಸಮಯದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ತಲುಪಲು ಹಾಗೂ ಬೆಂಗಳೂರಿನಿಂದ ಬೆಳಗಾವಿಗೆ ಬರಲು ಸಮಯ ಉಳಿತಾಯದ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.