ಉ.ಕ‌ ಸುದ್ದಿಜಾಲ ಅಥಣಿ :

ವಿದ್ಯುತ್ ಸ್ಪರ್ಶಿಸಿ ತಂದೆ ಹಾಗೂ ಮಗ ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟಿ ಗ್ರಾಮದಲ್ಲಿ ನಡೆದಿದೆ.

ಜಮೀನಿನಲ್ಲಿ‌ ಪಂಪ್‌ಸೆಟ್ ಬಂದ ಮಾಡಲು ತೆರಳಿದಾಗ  ತಂದೆ ಮಗ ಇಬ್ಬರು ಸಾವನಪ್ಪಿದ್ದು ಕುಟುಂಬಸ್ಥರ ಆಕ್ರಂದನ‌ಮುಗಿಲು ಮುಟ್ಟಿದೆ. ಮೃತ ತಂದೆ ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32) ಹಾಗೂ ಮಗ ಪ್ರೀತಮ ಮಲ್ಲಿಕಾರ್ಜುನ ಪೂಜಾರಿ (6) ಮೃತ ದುರ್ದೈವಿಗಳು.

ಕೃಷಿ ಕುಟುಂಬದವರಾದ ಮಲ್ಲಿಕಾರ್ಜುನ ಜಮೀನಿನಲ್ಲಿರಿವ ಜಮೀನಿನಲ್ಲಿದ್ದ ಪಂಪ್ ಸೆಟ್ ಬಂದ್ ಮಾಡಲು ಹೋದಾಗ ಜಮೀನಿನ ರಸ್ತೆ ಮದ್ಯ ಕೇಬಲ್ ಕಟ್ಟಾದ ಸ್ಥಳದಲ್ಲಿ ತೇವಾಂಶವಿದ್ದ ಕಾರಣ ವಿದ್ಯುತ್ ತಗುಲಿದೆ.

ವಿದ್ಯುತ್ ಸ್ಪರ್ಶದಿಂದ ತಂದೆ ಹಾಗೂ ಆರು ವರ್ಷದ ಪುಟ್ಟ ಮಗು ಸ್ಥಳದಲೇ ಸಾವನಪ್ಪಿದ್ದಾರೆ. ಆರು ವರ್ಷದ ಬಾಲಕ ಪ್ರೀತಮ ಅಥಣಿಯ ಶಾರದಾ ಮಾತಾ ಶಾಲೆಯಲ್ಲಿ ಒಂದನೆ ತರಗತಿಯಲ್ಲಿಯಲ್ಲಿ ಓದುತಿದ್ದ.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದ್ದು ತಂದೆ ಮಗನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.