ಉ.ಕ ಸುದ್ದಿಜಾ‌ಲ ಚಿಕ್ಕೋಡಿ :

ಕಳೆದ ಮೂರು ದಶಕಗಳಿಂದ ಚಿಕ್ಕೋಡಿ ಜಿಲ್ಲೆಯಾಗಬೇಕೆಂದು ಹೋರಾಟಗಳು ನಡೆಯುತ್ತಲೆ ಇವೆ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲೂ ಕೂಡಾ ಚಿಕ್ಕೋಡಿ ಜಿಲ್ಲೆ ಮಾಡತ್ತೀವಿ ಅಂತಾ ಆಶ್ವಾಸನೆ ಕೂಡಾ ನೀಡಿದರು.

ಆದರೆ, ಈ ವರೆಗೂ ಕೂಡಾ ಜಿಲ್ಲೆ ಮಾತ್ರ ಆಗಿಲ್ಲ, ನಮ್ಮಗೆ ಚಿಕ್ಕೋಡಿ ಜಿಲ್ಲೆ ಆಗಬೇಕೆಂದು ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಒಂದು ಕಡೆ ಲಕ್ಷ್ಮಣ ಸವದಿ ಅವರು ಕೂಡಾ ಅಥಣಿ ಜಿಲ್ಲೆಗೆ ಬೆಂಬಲೆ ಇದೆ ಎಂದಿದ್ದಾರೆ.

ಈಗಾಗಲೇ ಬೆಳಗಾವಿಯಲ್ಲಿ ಅಧಿವೇಶನ ಸಮೀಪಿಸುತ್ತಿದ್ದಂತೆ ಮತ್ತೆ ಮನ್ನೆಲೆಗೆ ಬಂದ ಬೆಳಗಾವಿ ವಿಭಜನೆ ಕೂಗು ಪ್ರತ್ಯೇಕ ಚಿಕ್ಕೋಡಿ ಜಿಲ್ಲೆ ರಚನೆಗೆ ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು. ಚಿಕ್ಕೋಡಿಯ ಪ್ರವಾಸಿ ಮಂದಿರದಿಂದ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಹೋರಾಟಗಾರರು.

ಆಗ್ಲೇಬೇಕು ಆಗ್ಲೇಬೇಕು ಚಿಕ್ಕೋಡಿ ಜಿಲ್ಲೆ ಆಗ್ಲೇಬೇಕು ಎಂದು  ಕೂಗಿದ ಪ್ರತಿಭಟನಾಕಾರರು. ಈ ಭಾಗದ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸೊದರು. ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡುವುದು ಬಹಳ ಅನಿವಾರ್ಯವಾಗಿದೆ. ಕಳೆದ ಮೂರು ದಶಕಗಳಿಂದ ನಾವು ಹೋರಾಟ ಮಾಡುತ್ತ ಬಂದಿದ್ದೇವೆ.

ನಮ್ಮ ಕೂಗು ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಕೇಳ್ತಿಲ್ಲ. ಗಡಿಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಆಗ್ತಿಲ್ಲ. ಚಿಕ್ಕೋಡಿ ಅಭಿವೃದ್ಧಿ ಹೊಂದಬೇಕಾದರೇ ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ ಜಿಲ್ಲೆಯನ್ನಾಗಿಸಬೇಕು ಎಂದು ಆಗ್ರಹಿಸಿದ್ದಾರೆ.