ಉ.ಕ ಸುದ್ದಿಜಾಲ ಅಥಣಿ :

ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ಗ್ರಾಮಸ್ಥರ ಬೈಕ್ ಏರಿ ತೋಟದ ವಸತಿ ಪ್ರದೇಶ ಜನರ ಕುಂದು ಕೊರತೆಗಳ ಆಲಿಸಿ ಸರಳತೆ ಮೆರೆದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮಕ್ಕೆ ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ, ಗ್ರಾಮದ ಯುವಕನನ್ನು ಕರೆದುಕೊಂಡು ಸಮಸ್ಯೆ ಇದ್ದ ಸ್ಥಳಕ್ಕೆ ಹೋಗಿ, ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆಗೆ ಸ್ಥಳದಲ್ಲಿ ಪರಿಹಾರ ನೀಡಿ ಬೈಕ್ ಮೇಲೆ ಸುತ್ತಾಡಿ ಗ್ರಾಮದ ಕುಂದುಕೊರತೆಯನ್ನು ಆಲಿದ ವಿಡಿಯೋ ಸಧ್ಯ ವೈರಲ್ ಆಗಿದೆ.