ಉ.ಕ‌ ಸುದ್ದಿಜಾಲ ಕಾಗವಾಡ :

ನಡು ರಸ್ತೆಯಲ್ಲಿ ಲಕ್ಷ್ಮಣ ಸವದಿ ಆಪ್ತನ ಬರ್ಬರ ಹತ್ಯೆ, ಅಥಣಿಯ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಖಿಳೇಗಾಂವ್ ಗ್ರಾಮದ ಹೊರವಲಯದಲ್ಲಿ ನಡೆದ ಘಟನೆ, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖೀಳೆಗಾಂವ್ ಗ್ರಾಮ,

ಗ್ರಾಮದ ಹೊರವಲಯದ ಖೀಳೆಗಾಂವ – ಅಥಣಿ ರಸ್ತೆಯಲ್ಲಿ ಹತ್ಯೆ, ಅಣ್ಣಪ್ಪ ಬಸಪ್ಪ ನಿಂಬಾಳ (58) ಕೊಲೆಯಾದ ದುರ್ದೈವಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹಲ್ಲೆಯಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವು,

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಕೊಲೆಯಾದ ವ್ಯಕ್ತಿ ಖೀಳೆಗಾಂವ ಗ್ರಾಮದ ಕೃಷಿ ಪತ್ತಿನ ಸಂಘ ಸಹಕಾರಿ ಅಧ್ಯಕ್ಷ, ಸ್ಥಳಕ್ಕೆ ಅಥಣಿ ಪೊಲೀಸರ ಬೇಟಿ ಪರಿಶೀಲನೆ ಮಾಡಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖೀಳೆಗಾಂವ್‌ನಲ್ಲಿ ಅಣ್ಣಪ್ಪ ಬಸಣ್ಣ ನಿಂಬಾಳ ಅವರ ಮೇಲೆ ಆರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇವರ ಮೇಲೆ ಮಾರಕಾಸ್ತ್ರಗಳಿಂದ ಹಠಾತ್ತನೆ ದಾಳಿ ನಡೆಸಿದ ಕಾರಣ ಅಣ್ಣಪ್ಪ ಬಸಣ್ಣ ನಿಂಬಾಳ ಅವರು ಮೃತರಾಗಿದ್ದಾರೆ.