ಉ.ಕ ಸುದ್ದಿಜಾಲ ಬೆಳಗಾವಿ :
ಮತ್ತೆ ಮುನ್ನೆಲೆಗೆ ಬಂತು ಅಖಂಡ ಬೆಳಗಾವಿ ಜಿಲ್ಲಾ ವಿಭಜನೆ ಚರ್ಚೆ ಬೆಳಗಾವಿ ಜಿಲ್ಲೆ ವಿಭಜನೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಅಷ್ಟೇ ಅಲ್ಲದೇ ಜಿಲ್ಲೆಯ ಬಿಜೆಪಿ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರ್ಧಾರ ಉಸ್ತುವಾರಿ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಜಿಲ್ಲೆಯ ಶಾಸಕರ ಸಭೆ ನಡೆಯಲಿ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್.
ಸಭೆಯಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡು ಸಿಎಂ ಮೇಲೆ ಒತ್ತಡ ಹೇರಬಹುದು ದಸರಾ ಹಬ್ಬದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕ್ತಿವಿ ಎಂದ ಹೆಬ್ಬಾಳ್ಕರ್ ಬೆಳಗಾವಿ ಜಿಲ್ಲೆ ಅಭಿವೃದ್ಧಿ ಆಗಬೇಕು ಅಂದ್ರೆ ವಿಭಜನೆಯೂ ಆಗಲೇಬೇಕು ಪತ್ರದ ಮುಖಾಂತರವೂ ಸಿಎಂ ಸಿದ್ದರಾಮಯ್ಯ ಕಂದಾಯ ಸಚಿವರಿಗೆ ಮನವಿ ಮಾಡ್ತಿವಿ.
ಬೆಳಗಾವಿ ಜಿಲ್ಲೆ ವಿಭಜಿಸಿ ಎರಡು ಅಥವಾ ಮೂರು ಜಿಲ್ಲೆ ಮಾಡಬೇಕಾಗಿದೆ ಯಾವುದು ಜಿಲ್ಲೆ ಆಗಬೇಕು ಅನ್ನೋದನ್ನ ನಾನು ಹೇಳಲಾರೆ, ಸರ್ಕಾರವೇ ನಿರ್ಧರಿಸಲಿ ಎಂದ ಹೆಬ್ಬಾಳ್ಕರ್ ಭೌಗೋಳಿಕವಾಗಯೂ ಜನಸಂಖ್ಯೆಯಿಂದಲೂ ಬೆಳಗಾವಿ ದೊಡ್ಡದಾಗಿದೆ ಎಂದ ಹೆಬ್ಬಾಳ್ಕರ್.
ಮತ್ತೊಂದೆಡೆ ಬೆಳಗಾವಿ ಜಿಲ್ಲೆ ವಿಭಜನೆಗೆ ಧ್ವನಿಗೂಡಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೋಳಿ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು, ಜಿಲ್ಲೆಗೂ ಮೊದಲು ಹೊಸ ತಾಲ್ಲೂಕು ರಚನೆ ಆಗಬೇಕಿದೆ. ನಾನು ಉಸ್ತುವಾರಿ ಸಚಿವ ಇದ್ದಾಗಲೂ ಇದನ್ನೇ ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ.
ಹೊಸ ತಾಲ್ಲೂಕುಗಳ ರಚನೆ ಬಳಿಕ ಬೆಳಗಾವಿ ಜಿಲ್ಲೆಯ ವಿಭಜನೆ ಮಾಡಲಿ ಬೆಳಗಾವಿ ವಿಭಜಿಸಿ ಗೋಕಾಕ, ಚಿಕ್ಕೋಡಿ ಜಿಲ್ಲೆ ಆಗಬೇಕೆಂದ ರಮೇಶ್ ಜಾರಕಿಹೊಳಿ ಸಾಧಕಬಾಧಕ ಚರ್ಚಿಸಿ ಬೆಳಗಾವಿ ಜಿಲ್ಲಾ ವಿಭಜನೆ ಆಗಲಿ ಎಂದ ಬಿಜೆಪಿ ಶಾಸಕ ಅಭಯ ಪಾಟೀಲ