ಉ.ಕ ಸುದ್ದಿಜಾಲ ಅಥಣಿ :
ಈ ಬಾರಿ ಬಿಗ್ ಬಾಸ್ ಸೀಸನ್ 11ಕ್ಕೆ ಅಚ್ಚರಿಯ ರೀತಿಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ಬಂಗಾರದ ಮನುಷ್ಯ ಎಂಟ್ರಿ ಪಡೆದಿದ್ದಾರೆ. ಕಳೆದೊಂದು ತಿಂಗಳಿನಿಂದ ಬಿಗ್ ಬಾಸ್ ಮನೆಗೆ ಅವರು, ಇವರು ಎಂಬ ಚರ್ಚೆ ಮಧ್ಯೆಯೇ ಅಥಣಿ ತಾಲೂಕಿನ ಪಾರ್ಥಹಳ್ಳಿ ಗ್ರಾಮದವರಾದ ಹಾಗೂ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಸುರೇಶ್ ಅವರು ಬಿಗ್ ಬಾಸ್ ಮನೆ ಸೇರಿದ್ದಾರೆ.

ಹನ್ನೊಂದನೆಯ ಸೀಸನ್‌ಗೆ 4ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದು ಈ ಗೋಲ್ಡ್ ಸುರೇಶ್. ಬಿಗ್‌ಬಾಸ್ ಪ್ರೋಮೋದಲ್ಲಿ ತೋರಿಸಿದ ಹಾಗೇ ಗೋಲ್ಡ್ ಸುರೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಪಬ್ಲಿಕ್ ಫಿಗರ್ ಆಗಿರೋ ಗೋಲ್ಡ್ ಸುರೇಶ್ ಅವರಿಗೆ ಇನ್ ಸ್ವಾಗ್ರಾಮ್ ಖಾತೆಯಲ್ಲಿ 15 ಸಾವಿರಕ್ಕೂ ಹೆಚ್ಚು ಪಾಲೋವರ್ಸ್ ಅನ್ನು ಹೊಂದಿರುವುದು ವಿಶೇಷ.
ಗೋಲ್ಡ್ ಸುರೇಶ್ ಹುಟ್ಟಿದ್ದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಪಾರ್ಥಹಳ್ಳಿ ಗ್ರಾಮದಲ್ಲಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಾವು ಮಾಡಿದ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ.
ಸದ್ಯ ಮೈಮೇಲೆ 2 ಕೋಟಿ ಬಂಗಾರವನ್ನು ಧರಿಸಿಕೊಂಡು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುತ್ತಿರುವುದರಿಂದ ಸಹಜವಾಗಿಯೇ ಉತ್ತರ ಕರ್ನಾಟಕ ಭಾಗದಲ್ಲಿ ಸಂತಸಕ್ಕೆ ಕಾರಣವಾಗಿದೆ.
ನಿನ್ನ ಕೈಯಿಂದ ಏನಾಗುತ್ತದೆ ಎಂದು ಯಾರೋ ಅಂದಿದ್ದಕ್ಕೆ ಹಳ್ಳಿಯನ್ನೇ ತ್ಯಜಿಸಿ ಅವಮಾನವನ್ನು ಸವಾಲಾಗಿ ಸ್ವೀಕರಿಸಿ ಬೆಂಗಳೂರಿಗೆ ಬಂದು ಕ್ರಿಯೆಟಿವ್ ಸಂಸ್ಥೆಯನ್ನು ಕಟ್ಟಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ತಮ್ಮ ನಾಯಿಗೂ ಬಂಗಾರದ ಚೈನ ಹಾಕಿರುವುದು ಇದನ್ನೊಂದು ವಿಶೇಷ.
ಬೆಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಳ್ಳಿ ಗ್ರಾಮದ ಸುರೇಶ ಅವರು ತಮ್ಮ ಗ್ರಾಮದ ಜಾತ್ರೆ, ಹಬ್ಬ ಹರಿದಿನಗಳಿಗೂ ಕೇವಲ ಒಂದು ದೂರವಾಣಿ ಕರೆ ಮಾಡಿದರೆ ಸಾಕು ಲಕ್ಷಾಂತರ ರೂ ದೇಣಿಗೆ ಕೊಡುವ ಉದಾತ್ತ ಗುಣದವರು. ಹೀಗಾಗಿ, ಅವರಿಗೆ ಕೊಡುಗೈ ದಾನಿ ಎಂತಲೂ ಅಭಿಮಾನಿಗಳು ಕರೆಯುತ್ತಾರೆ.