ಉ.ಕ ಸುದ್ದಿಜಾಲ ಚಿಕ್ಕೋಡಿ :
ಚಿಕ್ಕೋಡಿ – ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಕಳೆದ ರಾತ್ರಿ ಧಗಧಗಿಸಿದ ಕಾರ್. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದ ಹೊರವಲಯದ ಬಳಿ ಘಟನೆ ನಡೆದಿದೆ.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಾರ್‌ನಲ್ಲಿ ಕಾಣಿಸಿಕೊಂಡ ಬೆಂಕಿ. ಬೆಂಕಿಯ ತೀವ್ರತೆಗೆ ಸುಟ್ಟುಕರಕಲಾದ ಓರ್ವ ವ್ಯಕ್ತಿ. ಪೈರೋಜ್ ಬಡಗಾಂವ(40) ಕಾರ್‌ನಲ್ಲಿದ್ದ ವ್ಯಕ್ತಿ, ಪೈರೋಜ್ ಚಿಕ್ಕೋಡಿ ಪಟ್ಟಣದ ಮುಲ್ಲಾ ಪ್ಲಾಟ್ ನಿವಾಸಿ.
ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ, ಪರಿಶೀಲನೆ. ಸುಟ್ಟ ಕಾರ್ ಹಾಗೂ ಮೃತದೇಹ ಪರಿಶೀಲಿಸುತ್ತಿರುವ FSL ಟೀಂ. ಇದು ಅಪಘಾತವೋ ಅಥವಾ ಕೊಲೆಯೋ ಎಂದು ಅನುಮಾನ ವ್ಯಕ್ತಪಡಿಸುತ್ತಿರುವ ಸ್ಥಳೀಯರು. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ಜೈನಾಪುರ ಗ್ರಾಮದ ಬಳಿ ಹೊತ್ತಿ ಉರಿದ ಕಾರ್ ಪ್ರಕರಣ. ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು ಇದು ಅಪಘಾತವೋ ಅಥವಾ ಕೊಲೆಯೋ..? ಮೃತ ಪೈರೋಜ್ ಬಡಗಾಂವ ಚಿಕ್ಕೋಡಿ ಪಟ್ಟಣದ ಮುಲ್ಲಾ ಪ್ಲಾಟ್ ನಿವಾಸಿ.
ಮೃತ ಪೈರೋಜ್ ಕಾಂಗ್ರೆಸ್ ಕಾರ್ಯಕರ್ತನಾಗಿ ಗುರಿತಿಸಿಕೊಂಡಿದ್ದ. ಅಷ್ಟೇ ಅಲ್ಲದೇ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದ ಪೈರೋಜ್. ಚಿಕ್ಕೋಡಿ ಪಟ್ಟಣದಲ್ಲಿ ಉದ್ಯಮಿಯಾಗಿಯೂ ಗುರುತಿಕೊಂಡಿದ್ದ ಪೈರೋಜ್. ಸದ್ಯ ಪೈರೋಜ್ ಕಾರ್ ಹೊತ್ತಿ ಉರಿದ ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಪೊಲೀಸರ ವಿರುದ್ಧ ಗರಂ ಆದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ
ಕ್ರೈಂ ರೇಟ್ ತಡೆಯುವಲ್ಲಿ ವಿಫಲರಾದ್ರಾ ಬೆಳಗಾವಿ ಪೊಲೀಸರು.. ಪೊಲೀಸರ ವಿರುದ್ಧ ಗರಂ ಆದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ. ಚಿಕ್ಕೋಡಿ ಡಿಎಸ್‌ಪಿ ಹಾಗೂ ಪಿಎಸ್‌ಐರನ್ನು ತರಾಟೆಗೆ ತೆಗೆದುಕೊಂಡ ಪ್ರಕಾಶ ಹುಕ್ಕೇರಿ. ಜೈನಾಪುರ ಬಳಿಯ ಕಾರ್ ಹೊತ್ತಿ ಉರಿದ ಸ್ಥಳಕ್ಕೆ ಭೇಟಿ ನೀಡಿದ ವಿ.ಪ ಸದಸ್ಯ ಪ್ರಕಾಶ ಹುಕ್ಕೇರಿ.
ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಕಾಶ ಹುಕ್ಕೇರಿ. ನಮ್ಮ ಭಾಗದಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿ ಆಗ್ತಿವೆ. ಪೊಲೀಸರು ನೀವೇನು ಮಾಡ್ತಿದ್ದೀರಿ. ರಾಜ್ಯ ಹೆದ್ದಾರಿಯಲ್ಲಿಯೇ ಇಂತಹ ದುರ್ಘಟನೆ ಹೇಗೆ ಜರುಗಿತು.
ಕಾರ್ ಅಪಘಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವಿ.ಪ ಸದಸ್ಯ ಹುಕ್ಕೇರಿ. ಈ ಪ್ರಕರಣವನ್ನು ಸಿಒಡಿ ತನಿಖೆ ನೀಡಿ. ಬೇಕಾದ್ರೆ ನಾನು ಸಿಎಂ ಜತೆ ಮಾತನಾಡುತ್ತೇನೆ ಎಂದು ಪೊಲೀಸರಿಗೆ ತಿಳಿಸಿದ ಪ್ರಕಾಶ ಹುಕ್ಕೇರಿ.
ಇದು ಅಪಘಾತವಿರಲಿ ಅಥವಾ ಕೊಲೆ ಇರಲಿ ಈ ಪ್ರಕರಣವನ್ನು ಸಿಬಿಐ ಅಥವಾ ಸಿಒಡಿಗೆ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ.