ಉತ್ತರ ಕರ್ನಾಟಕ ಸುದ್ದಿಜಾಲ ಗೋಕಾಕ :

ಬೆಲಕಗಟವಿ ಜಿಲ್ಲೆಯ ಗೋಕಾಕ ಕಲ್ಯಾಣಿ ಸ್ವೀಟ್ ಮಾರ್ಟ್ ನಿನ್ನೆಯಷ್ಟೆ ಹೊಸದಾಗಿ ಪ್ರಾರಂಭವಾದ ಈ ಸ್ವೀಟ್ ಮಾರ್ಟ್ ಅಂಗಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಲಕ್ಷ್ಮೀ ಪೂಜೆಯೊಂದಿಗೆ ಅಪ್ಪೂವಿಗೂ ಸಹ ಪೂಜೆ ಸಲ್ಲಿಸಲಾಗಿತ್ತು.

ಲಕ್ಷ್ಮೀ ಮೂರ್ತಿಯ ಪಕ್ಕದಲ್ಲಿಯೇ ಅಪ್ಪು ಫೋಟೊ ಇರಿಸಿ ಕೆಳಗೆ ನಗುವಿನ ಪರಮಾತ್ಮ ಅಂತ ಸಾಲು ಬರೆದು ಅಪ್ಪುವಿಗೂ ಸಹ ಪೂಜೆ ಸಲ್ಲಿಸಲಾಯ್ತು‌. ಅಪ್ಪು ಅಗಲಿಕೆಯ ನೋವಿನಿಂದ ಅವರ ಅಭಿಮಾನಿಗಳು ಇನ್ನೂ ಹೊರಬಂದಿಲ್ಲವಾದ್ರೂ ಸಹ ಸದಾ ಒಂದಲ್ಲ ಒಂದು ರೀತಿಯಿಂದ ಅಪ್ಪುವನ್ನ ಅಭಿಮಾನಿಗಳು ನೆನೆಸಿಕೊಳ್ಳುತ್ತಲೇ ಇದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.