ಉತ್ತರ ಕರ್ನಾಟಕ ಸುದ್ದಿಜಾಲ ರಾಯಚೂರು :

ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ

ಜನವರಿ 14 ರಂದು ಪಂಚಮಸಾಲಿ ಹೋರಾಟ ವರ್ಷಾಚರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ‌ ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಹೇಳಿಕೆ ನೀಡಿದರು.

ಬಾಗಲಕೋಟೆ ಜಿಲ್ಲೆ ಕೂಡಲ ಸಂಗಮದಲ್ಲಿ ವರ್ಷಾಚರಣೆ ಆಯೋಜನೆ ಮಾಡಲಾಗಿದೆ. 2020 – 21 ರ ಅವಧಿಯಲ್ಲಿ ಪಂಚಮಸಾಲಿ ವತಿಯಿಂದ ನಡೆಸಿದ್ದ ಹೋರಾಟ. 2(ಎ) ಮೀಸಲಾತಿ ಸಂಬಂಧಿಸಿ ಹತ್ತು ಹಲವು ರೀತಿಯ ಹೋರಾಟ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.