ಉ.ಕ ಸುದ್ದಿಜಾಲ ಬಾಗಲಕೋಟೆ :

ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ನಿವೃತ್ತ ಶಿಕ್ಷಕನ ಪಾರ್ಥೀವ ಶರೀರ ಬಾದಾಮಿಗೆ ಆಗಮನ ಸಿದ್ದಯ್ಯ ಹಿರೇಮಠ (65) ಮೃತ ನಿವೃತ್ತ ಶಿಕ್ಷಕ ಬಾದಾಮಿ ಪಿ ಎಲ್ ಡಿ ಬ್ಯಾಂಕ್ ಮುಂದೆ ಶವವಿಟ್ಟು ಕುಟುಂಬಸ್ಥರು, ಅನುದಾನಿತ ಶಾಲಾ ಶಿಕ್ಷಕರ ಪ್ರತಿಭಟನೆ.

ಹಳೆ ಪಿಂಚಣಿಗಾಗಿ ಅನುದಾನಿತ ಶಾಲಾ ಶಿಕ್ಷಕರ ಹೋರಾಟಕ್ಕೆ ಸ್ಪಂದಿಸದ ಸರಕಾರ ಈ ಸಾವಿಗೆ ಸರ್ಕಾರವೇ ಹೊಣೆ ಅಂತಿರುವ ಕುಟುಂಬಸ್ಥರು, ಶಿಕ್ಷಕರು, ನಿನ್ನೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಶಿಕ್ಷಕ ಸಿದ್ದಯ್ಯ ಹಿರೇಮಠ.

ಸ್ಥಳದಲ್ಲಿ ಮೃತ ಶಿಕ್ಷಕನ ಪತ್ನಿ ಮಕ್ಕಳ ಗೋಳಾಟ, ಕುಟುಂಬಸ್ಥರ ಕಣ್ಣೀರಧಾರೆ ಕಳೆದ 141 ದಿನದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಸರಕಾರ ಪ್ರತಿಭಟನೆಗೆ ಕೇರ್ ಮಾಡಲಿಲ್ಲ.

ಇದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ನಿವೃತ್ತ ಶಿಕ್ಷಕ. ಪಟ್ಟದಕಲ್ಲು ಗ್ರಾಮದ ವೀರಶೈವ  ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಆರು ವರ್ಷದ ಹಿಂದೆ ನಿವೃತ್ತರಾಗಿದ್ದರು. 2006 ರಿಂದ ಪಿಂಚಣಿ ರದ್ದಾದ ಹಿನ್ನೆಲೆ ನಿವೃತ್ತಿ ವೇತನ ಸಿಗುತ್ತಿರಲಿಲ್ಲ.