ಉ.ಕ ಸುದ್ದಿಜಾಲ ಚಿಕ್ಕೋಡಿ :
ಬಟ್ಟೆ ಟೆಕ್ಸ್‌ಟೈಲಗೆ ಆಕಸ್ಮಿಕ ಬೆಂಕಿ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೊರಗಾಂವ ಪಟ್ಟಣದಲ್ಲಿ ಬೆಂಕಿ ಅವಘಡ ನಡೆದಿದೆ.
ಬೊರಗಾಂವ ಪಟ್ಟಣದ ಗಣೇಶ ಬಟ್ಟೆ ಟೆಕ್ಸ್‌ಟೈಲ‌್‌ಗೆ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ್ದು, ದಿಲೀಪ ಮಹಾಜನ ಅವರಿಗೆ ಸೇರಿದ ಗಣೇಶ ಟೆಕ್ಸ್‌ಟೈಲ‌್ ಆಕಸ್ಮಿಕ ಬೆಂಕಿಗೆ ಒಂಬತ್ತು ಪಾವರ ಲೂಮ್ ಮಷಿನ್ ಹಾಗೂ ಕಚ್ಚಾ ಮಟೇರಿಯಲ್ಲ ಬೆಂಕಿಗಾಹಿತಿ.
ಲಕ್ಷಾಂತರ ರೂಪಾಯಿ ಕಚ್ಚಾ ಮಟೇರಿಯಲ್ಲ ಬೆಂಕಿಗಾಹುತಿಯಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂಧಿ ಆಗಮನ ಸದಲಗಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.