ಉ.ಕ ಸುದ್ದಿಜಾಲ ಅಥಣಿ :

ತಾಳ್ಮೆ ಅನ್ನೋದು ಬಹಳ ಮುಖ್ಯ. ಅದು ಮನುಷ್ಯರೇ ಆಗಿರಲಿ ಅಥವಾ ಪ್ರಾಣಿಗಳೇ ಆಗಲಿ. ತಾಳ್ಮೆಯನ್ನು ಒಂದು ಹಂತದವರೆಗೂ ಸಹಿಸಿಕೊಳ್ಳಬಹುದು. ಆದರೆ ಸರ್ಕಾರಿ ಅಧಿಕಾರಿಗಳ ಎಮ್ಮೆ ಚರ್ಮದ ಧೋರಣೆ ಸಹನೆ, ತಾಳ್ಮೆಯ ಕಟ್ಟೆ ಹೊಡೆದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮ ಪಂಚಾಯ್ತಿಗೆ ಇಂದು ಎಮ್ಮೆ ಬಂದಿದೆ. ಈ ಎಮ್ಮೆ ನ್ಯಾಯ ಕೇಳಲು ಬಂದಿದ್ದು, ಪಂಚಾಯತ್ ಆಡಳಿತ ವ್ಯವಸ್ಥೆ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ..

ಆಕ್ರೋಶಕ್ಕೆ ಕಾರಣವೇನು?
2024ರಲ್ಲಿ ಸಂಬರಗಿ ಗ್ರಾಮ ಪಂಚಾಯ್ತಿಯಿಂದ ನರೇಗಾ ಯೋಜನೆ ಅಡಿ ಸುಮಾರು 134 ಶೇಡ್ ಮುಂಜೂರು ಮಾಡಲಾಗಿತ್ತು. ಆದರೆ ಪಂಚಾಯತ್ ರಾಜ್ಯ ಇಲಾಖೆ ಇಂಜಿನಿಯರ್ ಶಂಕರ ಶಾಸ್ತ್ರಿ ಅವರಿಂದ ಮಂಜೂರಾದ ದನಗಳ ಶೇಡ್ ರದ್ದು ಮಾಡಲಾಗಿದೆ.

ಮಂಜೂರಾದ ಶೇಡ್ ಪ್ರಕ್ರಿಯೆ ಕೈಗೊಳ್ಳದೇ ನಿರ್ಲಕ್ಷ್ಯಿಸಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಾಯತ್ ಕಚೇರಿ ಒಳಗೆ ಎಮ್ಮೆ ಕಟ್ಟಿ ತಮ್ಮ ಸಿಟ್ಟು ಹೊರ ಹಾಕಿದ್ದಾರೆ.