ಉ.ಕ ಸುದ್ದಿಜಾಲ ಬೆಳಗಾವಿ :

ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮರ್ಯಾದೆ ಹತ್ಯೆ ಕೇಸ್. ಏಪ್ರಿಲ್ 10ನೇ ಗುಪ್ತ ಮಾಹಿತಿ ಬಂದಿರುತ್ತೆ. ತಂದೆ, ತಾಯಿಯೇ ಸೇರಿಕೊಂಡು ಮಹಾರಾಷ್ಟ್ರದಲ್ಲಿ ಕೊಲೆ ಮಾಡಿರೋ ಬಗ್ಗೆ ಮಾಹಿತಿ. ಗುಪ್ತ ಮಾಹಿತಿ ಮೇಲೆ ವಿಚಾರಣೆ ಮಾಡಿದಾಗ. ಸತ್ಯವ್ವ ಎನ್ನುವ ಯುವತಿ ನಾಪತ್ತೆಯಾಗಿರೋ ಬಗ್ಗೆ ಮಾಹಿತಿ ಸಿಗುತ್ತದೆ. ಬೆಳಗಾವಿಯಲ್ಲಿ ಎಸ್ಪಿ ಕೆ ರಾಮರಾಜನ್ ಮಾಹಿತಿ.

ಸತ್ಯವ್ವ ಕೊಲೆ ಸಂಬಂಧ ಕೃಷ್ಣ ಪಾಟೀಲ್ ಎಂಬಾತನ ವಿಚಾರಣೆ. ಫೆಬ್ರವರಿ ತಿಂಗಳಲ್ಲಿ ಸತ್ಯವ್ವ ಕೃಷ್ಣ ಪಾಟೀಲ್ ಜೊತೆಗೆ ಓಡಿ ಹೋಗಿರುತ್ತಾರೆ‌. ಸತ್ಯವ್ವಗೆ ಈಗಾಗಲೇ ಮದುವೆಯಾಗಿರುತ್ತದೆ.
ನಾಲ್ಕು ವರ್ಷಗಳ ಹಿಂದೆ ಮದುವೆ. 12 ವಯಸ್ಸು ಇರುವಾಗಲೇ ಮದುವೆ ನಿಶ್ಚಯ. ಪತಿಯನ್ನು ಬಿಟ್ಟು ಕೃಷ್ಣ ಪಾಟೀಲ್ ಜೊತೆಗೆ ಸ್ನೇಹ.

ಪತಿ ಕುಡಿಯುತ್ತಾನೆ, ಸರಿಯಾಗಿ ನೋಡಿಕೊಳ್ಳಲ್ಲ. ಕೃಷ್ಣ ಪಾಟೀಲ್ ಜೊತೆಗೆ ಓಡಿ ಹೋಗಿರುತ್ತಾರೆ. ಯಮಕನಮರಡಿಯಲ್ಲಿ ಕೃಷ್ಣ ಪಾಟೀಲ್ ನಾಪತ್ತೆ ಕೇಸ್ ದಾಖಲು. ರಾಯಭಾಗದಲ್ಲಿ ಸತ್ಯವ್ವ ನಾಪತ್ತೆ ಬಗ್ಗೆ ಕೇಸ್ ದಾಖಲು. ಫೆಬ್ರವರಿ17 ರಂದು ಇಬ್ಬರು ಓಡಿ ಹೋಗಿರುತ್ತಾರೆ.

ಸತ್ಯವ್ವಳನ್ನು ವಾಪಸ್ ಬಂದ ಬಳಿಕ ಆಯಕೆನ್ನು ಮಹಾರಾಷ್ಟ್ರಕ್ಕೆ ಕರೆದುಕೊಂಡ ಕುಟುಂಬಸ್ಥರು. ಮಾರ್ಚ್ 21 ರಂದು ಸಂಧಾನದ ವೇಳೆ ಗಲಾಟೆ. ಸತ್ಯವ್ವ ಕೃಷ್ಣ ಪಾಟೀಲ್ ಬೀಡಲ್ಲ ಎಂದು ಹೇಳಿದ್ದು. ಸತ್ಯವ್ವ ಹಾಗೂ ತಾಯಿಗೆ ಗಲಾಟೆ, ಗಲಾಟೆಯಲ್ಲಿ ತಾಯಿಯ ಮೇಲೆ ಹಲ್ಲೆ. ಬಳಿಕ ಸತ್ಯವ್ವ ಚಿಕ್ಕಪ್ಪ ಪ್ರಕಾಶ, ಸಹೋದರ ಶಾನೂರು ಹೇಳವರ್, ಅಕ್ಕನ್ನ ಗಂಡ ಕಲ್ಲಪ್ಪ ಸೇರಿ ಕೊಲೆಗೆ ಪ್ಲ್ಯಾನ್.

ಸತ್ಯವ್ವಳಿಗೆ ವಿಷ ಪ್ರಾಷಾಣ. ವಿಷ ಸೇವಿಸಿದ ಬಳಿಕ ಸತ್ಯವ್ವ ಸಾವು. ತಕ್ಷಣವೇ ಸ್ಥಳೀಯ ಸಹಾಯ ಪಡೆದು ಮೃತದೇಹದ ಅಂತ್ಯಕ್ರಿಯೆ. ಲೋ ಬಿಪಿಯಿಂದ ಮೃತಪಟ್ಟ ಬಗ್ಗೆ ಸಂಬಂಧಿಕರಿಗೆ ಹೇಳಿದ ಕುಟುಂಬಸ್ಥರು. ಸತ್ಯವ್ವ ತಾಯಿಯ ಬಗ್ಗೆ ಹೇಳಿದ ಮಾಹಿತಿ ಅನುಸಾರ ಕೇಸ್.