ಉ.ಕ ಸುದ್ದಿಜಾಲ ವಿಜಯಪುರ :

ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ವಿಕಲಚೇತನರ ಗೋಳು. ಮಳೆ ಮಧ್ಯೆ ಕಣ್ಣೀರಿಟ್ಟು ಗೋಳು ತೋಡಿಕೊಂಡ ವಿಕಲಚೇತನ ಮಹಿಳೆ. ಸರ್ಕಾರ ನಾಲ್ಕು ತಿಂಗಳಿಂದ ಮಾಶಾಸನ ಬಿಡುಗಡೆ ಮಾಡದೇ ತಡೆಹಿಡಿದಿದೆ ಎಂದು ಹೋರಾಟ..

ಹೋರಾಟ ಮುಗಿಯುತ್ತಿದ್ದಂತೆ ಮಳೆ ಆರಂಭ. ಮಳೆಯಲ್ಲಿ ತೆವಳುಕೊಂಡೆ ಬಂದ ವಿಕಲಚೇತನ ಮಹಿಳೆ. ವಿಕಲಚೇತನ ಮಹಿಳೆ ಪರಿಸ್ಥಿತಿ ಕಂಡು ಮರುಗಿದ ಜನ. ‌ನೆಲದ ಮೇಲೆ ತೆವಳುಕೊಂಡು ಜಿಲ್ಲಾಧಿಕಾರಿ ಟೆಂಟ್ ನಲ್ಲಿ ರಕ್ಷಣೆ ಪಡೆದ ವಿಕಲಚೇತನ ಮಹಿಳೆ..

ಮಳೆಯಿಂದ ಬಟ್ಟೆಯೆಲ್ಲಾ ಒದ್ದೆ ಮಾಡಿಕೊಂಡು ಮಹಿಳೆ.. ಬೂಯಾರ ಗ್ರಾಮದ ಶೋಭಾ ಬಡಿಗೇರ ವಿಕಲಚೇತನ ಮಹಿಳೆ ಪರಿಸ್ಥಿತಿ…. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೂಯಾರ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ವಿಕಲಚೇತನ ಮಹಿಳೆ…

ನಾಲ್ಕು ತಿಂಗಳಿಂದ ಮಾಶಾಸನ ಬಂದಿಲ್ಲ, ನಮ್ಮದು ಬಡತನ ಪರಿಸ್ಥಿತಿ ಇದೆ ಎಂದು ಗೋಳು ತೋಡಿಕೊಂಡು ಕಣ್ಣೀರಿಟ್ಟ ವಿಕಲಚೇತನ ಮಹಿಳೆ ಶೋಭಾ. ಜೀವನ ನಡೆಸೋದು ಕಷ್ಟ ಆಗಿದೆ. ಮಾಶಾಸನ ಮೇಲೆ ಅವಲಂಬಿತವಾಗಿರೋ ಶೋಭಾ..

ಆದಾಯ ಮೀತಿ ಹೆಚ್ಚಿದೆ ಎಂದು ವಿಜಯಪುರ ಜಿಲ್ಲೆಯಲ್ಲಿ ವಿಕಲಚೇತನರ ಮಾಸಾಶನ ತಡೆ ಹಿಡಿದ ಸರ್ಕಾರ. ವಿಕಲಚೇತನರ ಆದಾಯ ಮೀತಿ 1.20 ಸಾವಿರಕ್ಕೆ ಏರಿಸುವಂತೆ ಮನವಿ. ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆ.