ಉ.ಕ ಸುದ್ದಿಜಾಲ ಬೆಳಗಾವಿ :
ಕಬ್ಬಿಗೆ 5500 ದರ ನಿಗದಿಗೆ ರೈತರ ಹೋರಾಟದ ಎಫೆಕ್ಟ್. ಬೆಳಗಾವಿಯ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಭೆಯತ್ತ ಎಲ್ಲರ ಚಿತ್ತ. ಇದೇ 26 ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರೋ ಸಭೆ. ಸಿಎಂ, ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ಸಭೆ.
ಸಭೆಯಲ್ಲಿ ಸರ್ಕಾರದ ಮುಂದೆ ಎರಡು ಮಹತ್ವದ ಬೇಡಿಕೆ ಪ್ರಸ್ತಾಪ ಮಾಡಿರುವ ರೈತರು. ತಮಿಳುನಾಡು ಮಾದರಿಯಲ್ಲಿ ಸರ್ಕಾರ ಪ್ರತಿ ಟನ್ ಗೆ 1 ಸಾವಿರ ಬೆಂಬಲ ಬೆಲೆ ನೀಡಬೇಕು. ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಗೆ ಹೆಚ್ಚುವರಿ 500 ರುಪಾಯಿ ಘೋಷಿಸಬೇಕು.
ಕಳೆದ ವರ್ಷ ಗುರ್ಲಾಪುರದಲ್ಲಿ ಹೋರಾಟದಿಂದ 300 ಹೆಚ್ಚವರಿ ದರ ಪಡೆದಿದ್ದ ರೈತರು. ಸರ್ಕಾರ 50 ರುಪಾಯಿ, ಕಾರ್ಖಾನೆಗಳು 250 ಸೇರಿಸಿ 300 ಹೆಚ್ಚವರಿ ಪಡೆದಿದ್ದರು. ಕಳೆದ ಒಟ್ಟು 3300 ದರ ಪಡೆದಿದ್ದ ರೈತರು. ಈ ವರ್ಷ ಕೇಂದ್ರದ ಎಂಎಸಪಿ ಹಾಗೂ ರಾಜ್ಯ ಸರ್ಕಾರ, ಕಾರ್ಖಾನೆಗಳು ಸೇರಿ 5500 ಡಿಮಾಂಡ್.
ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳು ಕಾಲಾವಕಾಶ. ರಾಜ್ಯ ಸರ್ಕಾರಕ್ಕೆ ಮತ್ತೆ ಗುರ್ಲಾಪುರ ಹೋರಾಟದ ಎಚ್ಚರಿಕೆ ಕೊಟ್ಟಿರುವ ರೈತರು.
