ಉ.ಕ ಸುದ್ದಿಜಾಲ ಮೋಳೆ :
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಮೋಳೆ ಗ್ರಾಮದ ಶ್ರೀ ಓಘ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಬೃಹತ್ ದನಗಳ ಪ್ರದರ್ಶನ ನಾಳೆ ಮಾರ್ಚ್ 3 ರಿಂದ ದಿ.7 ರವಗೆ ನಡೆಯಲಿದೆ.
ಜಾತ್ರೆಯ ನಿಮಿತ್ಯ ದಿ.03 ರವಿವಾರ ಸಾಯಂಕಾಲ 4 ಗಂಟೆಗೆ ಡೊಳ್ಳಿನ ಮೇಳದೊಂದಿಗೆ ವಿವಿಧ ಗ್ರಾಮಗಳಿಂದ ಆಗಮಿಸಿದ 6 ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಭೇಟಿ ಕಾರ್ಯಕ್ರಮ ಸಿದ್ದೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಪಲ್ಲಕ್ಕಿ ತಿರುಗುವುದು,ಭಂಡಾರ ಖಾರೀಕ ಉಧೋಳಿಸುವ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ಊರ ಮಧ್ಯ ಸ್ಥಳದಲ್ಲಿ ನಿಲುಗಡೆ.ನಂತರ 9 ಗಂಟೆಗೆ ವಿವಿದ ಗಾಯನ ಸಂಘಗಳಿಂದ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯಲಿದೆ.ದಿ.04 ಸೋಮವಾರ ರಂದು ಮುಂಜಾನೆ 6 ಗಂಟೆಗೆ ಓಘ ಸಿದ್ದೇಶ್ವರ ದೇವರಿಗೆ ಮಾಹಾ ಪೂಜೆ ಹಾಗೂ ನೈವೇದ್ಯ ನಡೆಯಲಿದೆ. ಸಂಜೆ 7 ಗಂಟೆಗೆ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿಗಳಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ,
ದಿ.5 ಮಂಗಳವಾರ ಮಧ್ಯಾಹ್ನ ಎರಡು ಗಂಟೆಗೆ ವಿವಿಧ ಗ್ರಾಮಗಳಿಂದ ಆಗಮಿಸಿದ ಪಲ್ಲಕಿಗಳ ಬಿಳ್ಕೋಡುವ ಸಮಾರಂಭ ನಡೆಯಲಿದೆ ದಿ.6 ಬುಧವಾರ 9 ಗಂಟೆಗೆ ರಿವರ್ಸ್ ಅಟೋ ರಿಕ್ಷಾ ಶರ್ಯತ್ತು ನಡೆಯಲಿದೆ
ದಿ.7 ಗುರುವಾರ ರಂದು ಒಂದು ಕುದುರೆ ಗಾಡಿ ಶರ್ಯತ್ತು ನಡೆಯಲಿದೆ,ಮಧ್ಯಾಹ್ನ 3.ಗಂಟೆಗೆ ರಂಗೋಲಿ ಸ್ಪರ್ಧೆ ನಡೆಯಲಿವೆ ಎಂದು ಜಾತ್ರಾ ಕಮೀಟಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.