ಉ.ಕ ಸುದ್ದಿಜಾಲ ಬೆಳಗಾವಿ :

ಮೊನ್ನೆ ಸಿದ್ದರಾಮಯ್ಯ ಮತ್ತೆ  ಮೂರು ಕೇಸ್ ಹಾಕಿಸಿದರು. ಒಂದನೇ ಕೇಸ್ ಹಾಕಿದ್ದಕ್ಕೆ ನನ್ನ ಆರೋಗ್ಯ ಸರಿಹೋಯಿತು. ಕೇಸ್ ಹಾಕಲಿ ನಾನು ಅಂಜುವುದಿಲ್ಲಾ ಕೇಸ್ ಮುಗದ ಹೋಗಿದೆ. ಸಿದ್ದರಾಮಯ್ಯ ಅವರಿಗೆ ನಾನು ಅಂದೇ ಎಷ್ಟ  ಕೇಸ್ ಹಾಕತಿ ಹಾಕು ಮಗನೆ ಅಂದೆ ಎಂದು ಸಿಎಂ ವಿರುದ್ದ ವಾಗ್ದಾಳಿ ನಡೆಸಿದ ಕೆನರಾ ಸಂಸದ ಅನಂತಕುಮಾರ ಹೆಗಡೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ಮತಕ್ಷೇತ್ರದ ಕೆ.ಎನ್ ಮಲ್ಲಾಪೂರ ಗ್ರಾಮದಲ್ಲಿ ಕಾರ್ಯಕರ್ತರ ಉದ್ದೇಶಿಸಿಅತನಾಡಿದ ಅವರು, ದೇಶ ಮತ್ತು ಧರ್ಮಕ್ಕಾಗಿ ಗಟ್ಟಿಯಾಗಿ ಮಾತಾಡಬೇಕು. ಇವತ್ತು ನಾನು ಮಾತನಾಡುತ್ತಿದ್ದೆ ನನ್ನ ಮೇಲೆ ಮೂರು ಕೇಸ್ ಹಾಕಿದ್ದಾರೆ. ಧರ್ಮ, ದೇಶದ ಬಗ್ಗೆ ಮಾತಾಡಿದ್ದಕ್ಕೆ ನನ್ನ ಮೇಲೆ ಕೇಸ್ ದಾಖಲಾಗಿದೆ.

ಕೇಸ್ ಹಾಕಲಿ ನನಗೆ ಅದರ ಬಗ್ಗೆ ಏನು ಬೇಸರ್ ಇಲ್ಲಾ . ಕೇಸ್ ಎಲ್ಲಾ ಮುಗದು ಆರೋಗ್ಯ ಸರಿ ಇರಲಿಲ್ಲಾ ಇಜ ಚುನಾವಣೆ ಬೇಡಾ ಅಂತಾ ಬಿಟ್ಟಿದ್ದೆ. ಕೆಲವು ಮಂದಿ ಬಂದು ಹೇಳಿರು ಈ ಚುನಾವಣೆ ಬೇಡಾ ಸಾಕಾಗಿ ಬಿಟ್ಟಿದೆ ನನಗೂ ಬೇಡಾ ಅಂತಾ ಬಿಟ್ಟಿದ್ದೆ. ನನ್ನ ಮೇಲೆ ಎಂಬತ್ತು ತೊಂಬತ್ತು ಕೇಸ್ ಇದ್ದು ಎಲ್ಲಾ ಮುಗದು ನನ್ನ ಆರೋಗ್ಯ ನಿಂತಿತ್ತು.

ಕೆಲವು ಜನ ಸಜ್ಜನರು ಅಂತಾ ಇರತ್ತಾರ ಅಲ್ಲಾ ನಮ್ಮ ಜೊತೆ ಅವರಿಗೆ ಬೇಸರ ಆಯಿತು ಅಂತೆ ಮಗನೆ ಅಂದಿದ್ದಕ್ಕೆ. ಅಲ್ಲರಿ ಸಿದ್ದರಾಮಯ್ಯನಂತಾ ಮನೆ ಮೂರ್ಖರಿಗೆ ನಮ್ಮ ದೇವಸ್ಥಾನದ ದುಡ್ಡ ತಗೊಂಡ ಹೋಗಿ ಮಸೀದಿಗೆ ಚರ್ಚಿಗೆ ಕೊಟ್ಟರೆ ಗೌರವದಿಂದ ಮಾತಾಡ್ಲಿ ಎನು. ಸಿದ್ದರಾಮಯ್ಯ ಅವರನ್ನ ಅಜ್ಜಾ ಮಾಮಾ ಅಂತಾ ಕರಿಲೇನು ನನ್ನತ್ರ ಆಗೋದಿಲ್ಲಾ ಎಂದ ಹೆಗಡೆ.

ನನ್ನ ಅಮ್ಮಾ ಹಂಗ ಹೇಳಿ ಕೊಟ್ಟಿಲ್ಲಾ ಧರ್ಮಕ್ಕೆ ದೇಶಕ್ಕೆ ವೀರೋಧ ಮಾಡತ್ತಾರಾ ಅಂದ್ರೆ ಮೊದಲು ಚೆಂಡು ತಗದ ಬಿಸಾಕು ಅಂತಾ ಕಲಿಸಿದ್ದಾರೆ. ಯುದ್ದ ಭೂಮಿಯಲ್ಲಿ ಭರತನಾಟ್ಯ, ಶಾಸ್ತ್ರೀಯ ಸಂಗೀತ ನಡೆಯೋದಿಲ್ಲಾ. ಸಿದ್ದರಾಮಯ್ಯನವರಿಗೆ ನಮ್ಮ ಭಾಷೆಯಲ್ಲಿ ಹೇಳಿದರೆ ಮಾತ್ರ ತಿಳಿಯುತ್ತೆ. ನಾನು ಸಿದ್ದರಾಮಯ್ಯ ಅವರು ಮೈಸೂರಿನ ಗರಡಿಯಲ್ಲಿ ಬೆಳದಿದ್ದೇವೆ.