ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲೊಂದು ಹೃದಯ ಸ್ಪರ್ಶಿ ಮನ ಮಿಡಿಯುವ ಘಟನೆ ನಡೆದಿದೆ. ಆಕಸ್ಮಿಕ ಅವಘಡದಲ್ಲಿ ಕಾಲುಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿದ್ದ ಪ್ರಶಾಂತ ಪೂಜೇರಿ ಎಂಬ ಯುವಕನ ಬಹು ಅಂಗಾಂಗಗಳನ್ನು ಅವರ ಪೋಷಕರು ಕೆಎಲ್ಇ ಆಸ್ಪತ್ರೆಗೆ ದಾನ ಮಾಡುವ ಮೂಲಕ ಇತರರಿಗೆ ಜೀವ ಜೀವದಾನ ನೀಡಲಾಗುತ್ತಿದೆ.

ಅಥಣಿಯ ವಿಠ್ಠಲ್.ಮಲ್ಲೇವಾಡಿ (ಪೂಜಾರಿ) ಇವರ ಪುತ್ರ ಪ್ರಶಾಂತ್ ಮಲ್ಲೇವಾಡಿ ಆಕಸ್ಮಿಕವಾಗಿ ಜರಿದು ಬಿದ್ದಾಗ ತಲೆಗೆ ಪೆಟ್ಟು ಆಗಿ ಸ್ಥಳೀಯ ಪಾಂಗಿ ಆಸ್ಪತ್ರೆಯಲ್ಲಿ ಇದ್ದರು. ತಲೆಯ ಒಳ ಪೆಟ್ಟು ಗಂಭೀರ ಆಗಿರುವ ಕಾರಣ ಮೆದುಳು ನಿಷ್ಕ್ರಿಯ  ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆದರೆ, ಈ ದುಃಖದ ಸಮಯದಲ್ಲಿಯೂ ಅವರ ತಂದೆ ವಿಠ್ಠಲ್ ಅವರು ವೈದ್ಯರ ಮತ್ತು ಆಪ್ತರ ಸಲಹೆಯ ಮೆರೆಗೆ ಪುತ್ರನ ಅಂಗಾಂಗ ಗಳನ್ನು ಇತರರ ಜೀವಕ್ಕೆ ಉಪಯೋಗ ಆಗಲೆಂದು KLE ಆಸ್ಪತ್ರೆಗೆ ದಾನ ಮಾಡಿರುತ್ತಾರೆ. ಯುವಕನ ವಿವಿಧ ಅಂಗಾಂಗಗಳನ್ನು ಅಗತ್ಯವಿರುವವರಿಗೆ ಕಸಿ ಮಾಡಲಾಗುತ್ತದೆ.