ಉ.ಕ ಸುದ್ದಿಜಾಲ ಮಂಡ್ಯ :

ಕಬ್ಬು ಕಟಾವು ವೇಳೆ ಚಿರತೆ ಮರಿಗಳು ಪ್ರತ್ಯಕ್ಷವಾಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚೊಟ್ಟನಹಳ್ಳಿ-ಮಾವಿನಹಳ್ಳಿ ಕೊಪ್ಪಲು ಗ್ರಾಮದ ಬಳಿ ನಡೆದಿದೆ.

ಕಬ್ಬು ಕಟಾವು ಮಾಡುವಾಗ ಸಿಕ್ಕ ಎರಡು ಚಿರತೆ ಮರಿಗಳು. ಸಂಜಯ್ ಹಾಗೂ ರವಿ ಎಂಬುವವರಿಗೆ ಸೇರಿರುವ ಕಬ್ಬು ಕಟಾವು. ಈ ವೇಳೆ ಚಿರತೆ ಮರಿ ಕಂಡು ಗಾಬರಿಗೆ ಒಳಗಾದ ಕಾರ್ಮಿಕರು. ಇನ್ನು ತಾಯಿ ಚಿರತೆ ಜೊತೆ ಮತ್ತೆರಡು ಚಿರತೆ ಮರಿಗಳು ಇರುವ ಶಂಕೆ. ಆತಂಕದಲ್ಲಿರುವ ಗ್ರಾಮಸ್ಥರು.

ಈ ಹಿಂದೆಯು ಹಲವು ಬಾರಿ ಚಿರತೆ ಪ್ರತ್ಯಕ್ಷದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಗ್ರಾಮಸ್ಥರು. ಸದ್ಯ ಸಿಕ್ಕ ಎರಡು ಚಿರತೆ ಮರಿಗಳ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ. ತಾಯಿ ಚಿರತೆ ಸೆರೆಹಿಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.