ಉ.ಕ ಸುದ್ದಿಜಾಲ ಕೊಪ್ಪಳ :

ಧಾರಕಾರ ಮಳೆಗೆ ರಾಶಿ ರಾಶಿ‌ ಮಕ್ಕೆಜೋಳ ಮಣ್ಣುಪಾಲು, ಮಳೆ ನೀರಿನಲ್ಲಿ ನೆನೆದ ಮಕ್ಕೆಜೋಳ ದುರ್ವಾಸನೆ, ಮಳೆ ಹೊಡೆತಕ್ಕೆ ರೈತನ ಕಣ್ಣಲ್ಲಿ ನೀರು. ಬಹದ್ದೂರ್ ಬಂಡಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಣಗಿಸಲು ಹಾಕಿದ ಮೆಕ್ಕೆಜೋಳ. ಮಳೆ ಹೊಡೆತಕ್ಕೆ ಅರ್ಧದಷ್ಟು ಮೆಕ್ಕೆಜೋಳ ನಷ್ಟ. ನಿನ್ನೆ ರಾತ್ರಿಯೆಲ್ಲ ಸುರಿದ ಮಳೆಗೆ ರಾಶಿ ರಾಶಿ ಮೆಕ್ಕೆಜೋಳ ಹಾನಿ.

ತಂದೆಯ ಸಂಕಷ್ಟ ಕಂಡು ವಿದ್ಯಾವಂತೆ ಮಗಳು ಕಣ್ಣೀರು, ನಮ್ಮಪ್ಪನ ಕಷ್ಟ ನಾನು ಇಂದೆ ನೋಡಿದ್ದು ಸಾರ್ ಅಂತಾ ಕಣ್ಣೀರು, ರೈತರ ಪಾಲಿಗೆ ಯಾವ ಲೀಡರ್ ಹಾಗೂ ಸರ್ಕಾರವಿಲ್ಲ‌ ಅಂತಾ ಕಣ್ಣೀರು ಅಪ್ಪ ಅಮ್ಮನೊಂದಿಗೆ ಮೆಕ್ಕೆಜೋಳ ಉಳಿಸಿಕೊಳ್ಳಲು ಪರದಾಟ.

ಬಿಇಡ್ ಓದಿದ ವಿದ್ಯಾವಂತೆ ಮಗಳು ಅಪ್ಪನ ಸಂಕಷ್ಟಕ್ಕೆ ಕಣ್ಣೀರು. ಮಳೆಗೆ ಹಾನಿಯಾದ ಮಕ್ಕೆಜೋಳವನ್ನು ತೋರಿಸಿ ಕಣ್ಣೀರಿಟ್ಟ ರೈತನ ಮಗಳು. ಕೊಪ್ಪಳದ ಸುತ್ತಮುತ್ತ ರೈತರ ಅಪಾರ ಪ್ರಮಾಣದ ಮೆಕ್ಕೆಜೋಳ ಹಾನಿ ಅಳಿದುಳಿದ ಮೆಕ್ಕೆಜೋಳ ಕಾಪಾಡಿಕೊಳ್ಳಲು ರೈತರು ಗೋಳಾಟ, ಲಕ್ಷಗಟ್ಟಲೆ ಬೆಲೆ ಬಾಳುವ ಮೆಕ್ಕಜೋಳ ಹಾನಿ. ನಾಳೆ ತೂಕ ಮಾಡಿ ಮಾರಾಟವಾಗಬೇಕಾಗಿದ್ದ ಮೆಕ್ಕೆಜೋಳ ನೀರು ಪಾಲು.

ಮಾರಾಟವಾಗಬೇಕಾದ ರೈತನ‌ ಬೆಳೆಯನ್ನು ಮಣ್ಣುಪಾಲು ಮಾಡಿದ ಮಳೆರಾಯ. ಸರ್ಕಾರ ಕರುಣೆ ತೋರಲು ರೈತರು ಮನವಿ. ಲಕ್ಷಗಟ್ಟಲೆ ಸಾಲ ಮಾಡಿ ಬೆಳೆದ ನೂರಾರು ಕ್ವಿಂಟಲ್ ಮೆಕ್ಕೆಜೋಳ ನಷ್ಟ.