ಉ.ಕ ಸುದ್ದಿಜಾಲ ಬಾಗಲಕೋಟೆ :

ತಾರಕಕ್ಕೇರಿದ ಪಂಚಮಸಾಲಿ ಸ್ವಾಮೀಜಿ VS ಕಾಶಪ್ಪನವರ ಕಾದಾಟವಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷನಾಗಿ ಸ್ವಾಮೀಜಿಗೆ ಸೆಡ್ಡು ಹೊಡೆದ ಕಾಶಪ್ಪನವರ.

ಟ್ರಸ್ಟ್ ಅಡಿಯಲ್ಲಿ ಇರೋ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠ. ಪಂಚಮಸಾಲಿ ಪೀಠಕ್ಕೆ ಪರ್ಯಾಯ ಸ್ವಾಮೀಜಿ ನೇಮಕ ವಿಚಾರ ಚರ್ಚೆ ಮುನ್ನಲೆಯ ಮಧ್ಯೆ ಟ್ರಸ್ಟ್ ಗೆ ನೂತನ ಅಧ್ಯಕ್ಷ.

ಇದೇ ಏ.19ರಂದು ಕೂಡಲಸಂಗಮದಲ್ಲಿ ಟ್ರಸ್ಟ್ ವತಿಯಿಂದ ಕರೆದಿರೋ ಮಹತ್ವದ ಸಭೆ. ಸಭೆಗೆ ಎರಡು ದಿನ ಬಾಕಿ ಇರುವಾಗಲೇ ಟ್ರಸ್ಟ್ ನ ಅದ್ಯಕ್ಷಗಿರಿ ಕಾಶಪ್ಪನವರ ಹೆಗಲಿಗೆ.

ಇನ್ನೊಂದೆಡೆ ಏ.20ಕ್ಕೆ ಸಭೆ ಕರೆದಿರೋ ಬಸವಜಯ ಮೃತ್ಯುಂಜಯ ಸ್ವಾಮೀಜಿ. ಪಂಚಮಸಾಲಿ ಪೀಠದ ಅಸ್ತಿತ್ವದ ಆಟ ಮೇಲಾಟಗಳ ಮದ್ಯೆ ಟ್ರಸ್ಟ್ ನ ಚುಕ್ಕಾಣಿ ಇದೀಗ ಕಾಶಪ್ಪನವರ ಕೈಗೆ.

ಟ್ರಸ್ಟ್ ಗೆ ನೂತನ ಸಾರಥಿಯಾದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷರಾಗಿ ಕಾಶಪ್ಪನವರ ಆಯ್ಕೆ. ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಶಾಸಕ ವಿಜಯಾನಂದ ಕಾಶಪ್ಪನವರ.

ಹಾಲಿ ಅಧ್ಯಕ್ಷ ಪ್ರಬಣ್ಣ ಹುಣಶಿಕಟ್ಟಿ ರಾಜೀನಾಮೆ ಬೆನ್ನಲ್ಲೆ ಕಾಶಪ್ಪನವರ ಅಧ್ಯಕ್ಷ. ಟ್ರಸ್ಟ್ 34 ಜನರ ಒಕ್ಕೊರಲಿನಿಂದ ಅವಿರೋಧ ಆಯ್ಕೆ.

ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಇಂದು ನಡೆದ ಸಭೆಯಲ್ಲಿ ಆಯ್ಕೆ. ಟ್ರಸ್ಟ್ ನ ಸದಸ್ಯರೊಂದಿಗೆ ಸಭೆ ನಡೆಸಿದ ಅದ್ಯಕ್ಷ ವಿಜಯಾನಂದ ಕಾಶಪ್ಪನವರ..