ಉ.ಕ ಸುದ್ದಿಜಾಲ ಹುಬ್ಬಳ್ಳಿ :

ಭೀಕ್ಷೆ ಬೇಡುವ ನೆಪದಲ್ಲಿ ಅಂಗಡಿಗೆ‌ ನುಗ್ಗಿದ ಮಹಿಳೆಯರು ಹಾಗೂ ಮಕ್ಕಳು, ಮಾಲೀಕನ ಗಮನ ಬೇರೆಡೆ ಸೆಳೆದು ಲಕ್ಷ ಲಕ್ಷ ಬೆಲೆಯ ಚಿನ್ನದ ಗಟ್ಟಿ ದೋಚಿದ್ದಾರೆ ಕಳ್ಳಿಯರ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಬಂಗಾರದ ಅಂಗಡಿಗೆ ಬಂದ ಭಿಕ್ಷುಕರು ನೋಡು ನೋಡುತ್ತಿದ್ದಂತೆ ಚಿನ್ನದ ಗಟ್ಟಿ ಮಂಗಮಾಯ ಮಾಡಿರುವ ಘಟನೆ ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಭೀಕ್ಷೆ ಬೇಡುವ ನೆಪದಲ್ಲಿ ಕಳ್ಳತನ

ಮಾಲೀಕನ ಕಣ್ಣೆದುರೆಲ್ಲೇ 200 ಗ್ರಾಂ ಚಿನ್ನದ ಗಟ್ಟಿ ಕಳುವು ಮಾಡಿದ್ದು, ಅಂಗಡಿ ಮಾಲಿಕ ಘಂಟಿಕೇರಿ ಠಾಣೆಯಲ್ಲಿ ದೂರು ನೀಡಿದ್ದಾನೆ. ಅಂಗಡಿ ಮಾಲಿಕನ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಾಕಿ ಕಳ್ಳಿಯರ ಬಂದನಕ್ಕೆ ಬಲೆ ಬೀಸಿದ್ದಾರೆ.